Home ಟಾಪ್ ಸುದ್ದಿಗಳು ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಕಾನ್ ಸ್ಟೇಬಲ್ ಮೃತ್ಯು

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಕಾನ್ ಸ್ಟೇಬಲ್ ಮೃತ್ಯು

ಬೆಂಗಳೂರು: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಪೋಲಿಸ್ ಹೆಡ್ ಕಾನ್ ಸ್ಟೇಬಲ್ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೆಂಗಳೂರು- ಹಾಸನ ಹೆದ್ದಾರಿಯ ಸೋಲೂರು ಗ್ರಾಮದ ಬಳಿ ಸರ್ವೀಸ್ ರಸ್ತೆಯಲ್ಲಿ ನಡೆದಿದೆ.


ಬೆಂಗಳೂರು ಕಮಲನಗರದಲ್ಲಿ ವಾಸವಾಗಿದ್ದ ಶ್ರೀನಿವಾಸ್ (45) ಮೃತ ಪೋಲಿಸ್ ಹೆಡ್ ಕಾನ್ ಸ್ಟೇಬಲ್.


ಸೋಲೂರು ಮೂಲದ ಮೃತ ಪೋಲಿಸ್ ಹೆಡ್ ಕಾನ್ ಸ್ಟೇಬಲ್ ಬೆಂಗಳೂರಿನ ಉಪ್ಪಾರಪೇಟೆ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಡ್ಯೂಟಿ ಮುಗಿಸಿ ಬೈಕ್ ನಲ್ಲಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಮತ್ತೊಂದು ಬೈಕ್ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಹೆಡ್ ಕಾನ್ಸ್ಟೇಬಲ್ ಶ್ರೀನಿವಾಸ್ ಸ್ಥಳದಲ್ಲೇ ಸಾವನಪ್ಪಿದ್ದಾರೆ.

Join Whatsapp
Exit mobile version