Home ಟಾಪ್ ಸುದ್ದಿಗಳು ಮೆಜೆಸ್ಟಿಕ್’ನಲ್ಲಿ ಓಡಾಡುತ್ತಿದ್ದ ಬಾಲಕನನ್ನು ಪೋಷಕರ ಮಡಿಲಿಗೆ ಒಪ್ಪಿಸಿದ ಪೇದೆ: ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

ಮೆಜೆಸ್ಟಿಕ್’ನಲ್ಲಿ ಓಡಾಡುತ್ತಿದ್ದ ಬಾಲಕನನ್ನು ಪೋಷಕರ ಮಡಿಲಿಗೆ ಒಪ್ಪಿಸಿದ ಪೇದೆ: ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

ಬೆಂಗಳೂರು: ಬೊಮ್ಮಸಂದ್ರದ ಮನೆಯಿಂದ ತಪ್ಪಿಸಿಕೊಂಡು ಮೆಜೆಸ್ಟಿಕ್’ನಲ್ಲಿ ಓಡಾಡುತ್ತಿದ್ದ ಬಾಲಕನೊಬ್ಬನನ್ನು ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಗಮನಿಸಿ ಆತನ ಮನವೊಲಿಸಿ ವಾಪಸ್ ಆತನ ಮನೆಗೆ ತಲುಪಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಚಿಕ್ಕಪೇಟೆ ಸಂಚಾರ ಪೊಲೀಸ್ ಕಾನ್ಸ್’ಟೇಬಲ್ ಶ್ರೀಕಾಂತ್ ಸೂಳೆಬಾವಿ ಅವರು ಬಾಲಕನನ್ನು ಮರಳಿ ಪೋಷಕರ ಮಡಿಲಿಗೆ ತಲುಪಿಸಿ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.


ಕಳೆದ ರಾತ್ರಿ ಕಾನ್ಸ್ ಟೇಬಲ್ ಶ್ರೀಕಾಂತ್ ಸೂಳೆಬಾವಿ ಅವರು ಕರ್ತವ್ಯದಲ್ಲಿದ್ದಾಗ ಮೆಜೆಸ್ಟಿಕ್’ನಲ್ಲಿ ಒಬ್ಬಂಟಿಯಾಗಿ ಓಡಾಡುತ್ತಿದ್ದ ಬಾಲಕನನ್ನು ಕರೆದು ವಿಚಾರಿಸಿದ್ದಾರೆ. ಆಗ ಈ ಬಾಲಕ ಬೊಮ್ಮಸಂದ್ರದಿಂದ ತಪ್ಪಿಸಿಕೊಂಡಿರುವುದಾಗಿ ಹೇಳಿದ್ದಾನೆ. ಕೂಡಲೇ ಈತನ ಪೋಷಕರನ್ನು ಸಂಪರ್ಕಿಸಿದ ಸಂಚಾರ ಕಾನ್ಸ್’ಟೇಬಲ್, ಪೋಷಕರಿಗೆ ಬಾಲಕನನ್ನು ಒಪ್ಪಿಸಿದ್ದಾರೆ. ಕಾನ್ಸ್ ಟೇಬಲ್ ಶ್ರೀಕಾಂತ್ ಸಮಯಪ್ರಜ್ಞೆಗೆ ಹಿರಿಯ ಅಧಿಕಾರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಬೊಮ್ಮಸಂದ್ರ ದಿಂದ ಕಳೆದುಹೋಗಿದ್ದ ಬಾಲಕನನ್ನು ಠಾಣಾ ಸರಹದ್ದಿನ ಮೆಜೆಸ್ಟಿಕ್ ನಲ್ಲಿ ವಿಚಾರಿಸಿ ಬಾಲಕನ ತಂದೆಯನ್ನು ಸಂಪರ್ಕಿಸಿ ಅವರ ವಶಕ್ಕೆ ಒಪ್ಪಿಸಿರುತ್ತಾರೆ.

Join Whatsapp
Exit mobile version