Home ಟಾಪ್ ಸುದ್ದಿಗಳು ಕೇರಳ | SDPI ಮುಖಂಡನ ಹತ್ಯೆಗೆ ಸಂಚು: ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ RSS ಕಾರ್ಯಕರ್ತರು

ಕೇರಳ | SDPI ಮುಖಂಡನ ಹತ್ಯೆಗೆ ಸಂಚು: ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ RSS ಕಾರ್ಯಕರ್ತರು

ಆಲಪ್ಪುಝ:  ಮನ್ನಂಚೇರಿಯ ಅಂಬಲಕಡವು ಎಂಬಲ್ಲಿ SDPI ಮುಖಂಡರೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ ಆರ್ ಎಸ್ ಎಸ್ ಕಾರ್ಯಕರ್ತರನ್ನು ಮಾರಕಾಸ್ತ್ರಗಳೊಂದಿಗೆ ಸ್ಥಳೀಯರು ಬಂಧಿಸಿದ್ದಾರೆ.

SDPI ಮಾಜಿ ಜಿಲ್ಲಾಧ್ಯಕ್ಷ, ಮನ್ನಂಚೇರಿ ಪಂಚಾಯತ್ ಸದಸ್ಯ, ನವಾಝ್ ಎಂಬವರ ಹತ್ಯೆಗೆ ಸಂಚು ರೂಪಿಸಿದ್ದ RSS ಕಾರ್ಯಕರ್ತರು ಕೊಲೆ ಮಾಡಲು ಹೊಂಚು ಹಾಕಿದ್ದು, ಈ ಪ್ರದೇಶದಲ್ಲಿ ಮತ್ತೆ ಗಲಭೆಗಳನ್ನು ಸೃಷ್ಟಿಸುವ ಆರ್ ಎಸ್ ಎಸ್ ಪಿತೂರಿಯ ಭಾಗವಾಗಿದೆ ಎಂದು ಎಸ್ ಡಿಪಿಐ ಆಲಪ್ಪುಝ ಮಂಡಲದ ಅಧ್ಯಕ್ಷ ಜಯರಾಜ್ ಹೇಳಿದ್ದಾರೆ.

ಸಂಘ ಪರಿವಾರದ ಕಾರ್ಯಕರ್ತರಾದ ಬಿಟ್ಟು ಯಾನೆ ಸುಮೇಶ್ ಮತ್ತು ಶ್ರೀನಾಥ್  ಪ್ರಮುಖ ಆರೋಪಿಗಳು. ಇನ್ನಿಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು ವಿಚಾರಣೆ ನಡೆಸಿದಾಗ, ಎಸ್ ಡಿಪಿಐ ನಾಯಕನನ್ನು ಕೊಲ್ಲಲು ಬಂದಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಪಿತೂರಿಯನ್ನು ಬಯಲಿಗೆಳೆಯಬೇಕು ಎಂದು ಜಯರಾಜ್ ಒತ್ತಾಯಿಸಿದರು.

ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ SDPI ನಾಯಕರು,ಕೆಲವು ತಿಂಗಳುಗಳ ಹಿಂದೆ sdpi ರಾಜ್ಯ ಕಾರ್ಯದರ್ಶಿ ಕೆ. ಎಸ್ ಶಾನ್ ರನ್ನು ಹತ್ಯೆಗೈದ 100 ಮೀ ಅಂತರದಲ್ಲಿ ಘಟನೆ ನಡೆದಿದೆ. ಗೆಳೆಯನೊಂದಿಗೆ ಮನೆಗೆ ತೆರಳುತ್ತಿದ್ದ ವೇಳೆ  ದಾರಿ ಮಧ್ಯೆ ಹೆಲ್ಮೆಟ್ ಮತ್ತು ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಬೈಕ್ ನಿಲ್ಲಿಸಿದ್ದನ್ನು ಕಂಡು, ಆತನ ಬಳಿ ಹೋಗಿ ಯಾರು ಎಂದು ಕೇಳುವಾಗ  ಆತ ಸುಮ್ಮನಿದ್ದು , ಅವರು ತೆರಳಲು ಅಣಿಯಾಗುತ್ತಿದ್ದಂತೆಯೇ  ಗೋಡೆಯೊಂದರ ಹಿಂಬದಿಯಿಂದ ಬಂದ ಸುಮೇಶ್ ತಲವಾರನ್ನು ಬೈಕ್ ನಲ್ಲಿದ್ದ ಶ್ರೀನಾಥ್ ಗೆ ಕೊಟ್ಟು ಸಹಕರಿಸಿದ್ದಾನೆ. ತಲವಾರು ಬೀಸಿದಾಗ ತಡೆಯಲೆತ್ನಿಸಿದ ನಿಶಾದ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ತಕ್ಷಣವೇ  ಸ್ಥಳಕ್ಕಾಗಮಿಸಿದ  ಸ್ಥಳೀಯರು ಸುಮೇಶ್ ನನ್ನು ಪೊಲೀಸರಿಗೊಪ್ಪಿಸಿದ್ದಾರೆ. ಸಿ ಐ ಗೆ ನವಾಝ್ ಕರೆಮಾಡಿ ಘಟನೆಯ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರೊಂದಿಗೆ ಶ್ರೀನಾಥ್ ತಪ್ಪಿಸಿಕೊಂಡಿದ್ದಾನೆ .ಆತನ ಬಳಿ ಆಯುಧಗಳಿವೆ ಎಂದು ಹೇಳಿದಾಗ ಅದನ್ನು ಕಿವಿಗೊಡದೆ ಸುಮೇಶ್ ನನ್ನು ಬಂಧಿಸಿ, ಶ್ರೀನಾಥ್ ನ ಹುಡುಕಾಟಕ್ಕೆ ಪ್ರಯತ್ನಿಸದೇ ಎಲ್ಲವೂ ಕೊನೆಗೊಂಡಿದೆ  ಎಂಬಂತೆ ಪೊಲೀಸರು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ .

Join Whatsapp
Exit mobile version