Home ಟಾಪ್ ಸುದ್ದಿಗಳು ‘ರಾಜ್ಯದ ಜನತೆ ಬಯಸುತ್ತಿರುವುದು ಸರ್ಕಾರದ ಬದಲಾವಣೆಯೇ ಹೊರತು ನಾಯಕತ್ವ ಬದಲಾವಣೆಯಲ್ಲ’: ಕಾಂಗ್ರೆಸ್

‘ರಾಜ್ಯದ ಜನತೆ ಬಯಸುತ್ತಿರುವುದು ಸರ್ಕಾರದ ಬದಲಾವಣೆಯೇ ಹೊರತು ನಾಯಕತ್ವ ಬದಲಾವಣೆಯಲ್ಲ’: ಕಾಂಗ್ರೆಸ್

ಬೆಂಗಳೂರು: ಬಿಜೆಪಿಯ ದುರಾಡಳಿತದಿಂದ ಬೇಸತ್ತ ರಾಜ್ಯದ ಜನತೆ ಬಯಸುತ್ತಿರುವುದು “ನಾಯಕತ್ವ ಬದಲಾವಣೆ” ಅಲ್ಲ “ಸರ್ಕಾರದ ಬದಲಾವಣೆ” ಎಂದು ರಾಜ್ಯ ಕಾಂಗ್ರೆಸ್ ಘಟಕ ಹೇಳಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ತಮ್ಮದು ವಿಫಲ ಸರ್ಕಾರ, ವಿಫಲ ಆಡಳಿತ, ವಿಫಲ ನಾಯಕತ್ವ ಎನ್ನುವುದನ್ನು ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಘೋಷಣೆ ಮಾಡುವ ಮೂಲಕ ಒಪ್ಪಿಕೊಂಡಂತಾಗಿದೆ. ಅವರೇ ಹೇಳಿಕೊಳ್ಳುವಂತೆ ಸಮರ್ಥ ಆಡಳಿತವೇ ಆಗಿದ್ದಿದ್ದರೆ ಈ ‘ಪದಚ್ಯುತಿ’ ಮಾಡಿದ್ದೇಕೆ? ಎಂದು ಪ್ರಶ್ನೆಸಿದೆ.

ಬಿಜೆಪಿಯ ದುರಾಡಳಿತದಿಂದ ಬೇಸತ್ತ ರಾಜ್ಯದ ಜನತೆ ಬಯಸುತ್ತಿರುವುದು ‘ನಾಯಕತ್ವ ಬದಲಾವಣೆ’ ಅಲ್ಲ ‘ಸರ್ಕಾರದ ಬದಲಾವಣೆ’ ಬಿಜೆಪಿಗೆ ತಾಕತ್ತಿದ್ದರೆ, ನೈತಿಕತೆಯಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ, ರಾಜ್ಯವನ್ನು ಯಾರು ಆಳಬೇಕು ಎನ್ನುವುದನ್ನು ಜನರೇ ನಿರ್ಧರಿಸಲಿ ಎಂದು ಹೇಳಿದೆ.

Join Whatsapp
Exit mobile version