Home ಟಾಪ್ ಸುದ್ದಿಗಳು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲೂ ಇರಲ್ಲ: ಕೆ. ಎಸ್. ಈಶ್ವರಪ್ಪ

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲೂ ಇರಲ್ಲ: ಕೆ. ಎಸ್. ಈಶ್ವರಪ್ಪ

ಶಿವಮೊಗ್ಗ: ನನ್ನ ಮೇಲಿನ ಕಮಿಷನ್ ಆರೋಪದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. 10, 20, 40% ಅಂತಾ ಬಾಯಿಗೆ ಬಂದಂತೆ ಕಮಿಷನ್ ಬಗ್ಗೆ ಮಾತನಾಡುತ್ತಾರೆ. ಸಂತೋಷ್ ಪಾಟೀಲ್ ಸಾವಿಗೆ ಯಾರು ಕಾರಣ ಎಂದು ತನಿಖೆ ನಡೆಯುತ್ತಿದೆ. ತನಿಖೆಯಾಗಿ ಸತ್ಯ ಹೊರಬರಲಿ. ನಾನು ಅದರ ಬಗ್ಗೆ  ಈಗ ಮಾತನಾಡಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರಿಗೆ ಬೇರೆ ಕೆಲಸಾನೇ ಇಲ್ಲ. ಒಂದು ಮುಸಲ್ಮಾನರನ್ನು ತೃಪ್ತಿ ಪಡಿಸುವುದು. ಇನ್ನೊಂದು ಕಮಿಷನ್ ಬಗ್ಗೆ ಮಾತನಾಡುವುದು ಬೆಳಿಗ್ಗೆಯಿಂದ ರಾತ್ರಿವರೆಗೂ ಇದೇ ಕೆಲಸ ಅವರಿಗೆ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಸೋತರೂ ಕಾಂಗ್ರೆಸ್ ಅವರಿಗೆ ಬುದ್ದಿ ಬಂದಿಲ್ಲ. ಮುಂದಿನ ಚುನಾವಣೆಯಲ್ಲಿ ಅವರು ವಿರೋಧ ಪಕ್ಷದ ಸ್ಥಾನದಲ್ಲೂ ಇರಲ್ಲ ಜನಪರವಾದ ಕೆಲಸ ಮಾಡಿ, ಜನ ಒಪ್ಪಿಕೊಳ್ಳುತ್ತಾರೆ, ಅಧಿಕಾರ ಕೊಡುತ್ತಾರೆ. ಅದು ಬಿಟ್ಟು ಕೋಮುಗಲಭೆ ಸೃಷ್ಟಿಸಿ, ಅಧಿಕಾರ ಪಡೆಯುವ ಹವಣಿಕೆ ಬೇಡ. ಕೋಮುಗಲಭೆ ಉಂಟು ಮಾಡಿ, ಎಷ್ಟು ಜನ ಸಾಯಲು ಅವಕಾಶ ಮಾಡಿ ಕೊಡುತ್ತೀರಾ..? ಇನ್ನೂ ಎಷ್ಟು ಜನ ಸಾಯಬೇಕು ಎಂದು ಪ್ರಶ್ನಿಸಿದ್ದಾರೆ

Join Whatsapp
Exit mobile version