Home ಟಾಪ್ ಸುದ್ದಿಗಳು ಛತ್ತೀಸ್ ಗಡ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಗೆಲುವು; ಬಿಜೆಪಿಗೆ ಹಿನ್ನಡೆ

ಛತ್ತೀಸ್ ಗಡ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಗೆಲುವು; ಬಿಜೆಪಿಗೆ ಹಿನ್ನಡೆ

ರಾಯಿಪುರ: ಛತ್ತೀಸ್ ಗಡದ 15 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ 300 ವಾರ್ಡ್ ಗಳಲ್ಲಿ 174 ಕಡೆ ಜಯ ಗಳಿಸುವ ಮೂಲಕ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ.


ಬಿಜೆಪಿಯು 89 ಕಡೆ ಜಯಗಳಿಸಿದೆ. ಈಗಾಗಲೇ ಅಧಿಕಾರದಲ್ಲಿದ್ದ ನಗರ ಸಂಸ್ಥೆಗಳನ್ನು ಅದು ಕಳೆದುಕೊಂಡಿದೆ. ಉಳಿದ ಸ್ಥಾನಗಳು ಪಕ್ಷೇತರರು ಮತ್ತು ಇತರ ಪಕ್ಷಗಳ ಪಾಲಾಗಿದೆ.
ಪಕ್ಷೇತರರು 31 ಕಡೆ ಮತ್ತು ಜನತಾ ಕಾಂಗ್ರೆಸ್ ಪಕ್ಷವು 6 ಕಡೆ ಗೆದ್ದಿದೆ. ಚುನಾವಣಾ ಆಯೋಗವು ಇನ್ನೂ 70 ಕ್ಷೇತ್ರಗಳ ಫಲಿತಾಂಶವನ್ನು ಪ್ರಕಟಿಸಬೇಕಾಗಿದೆ.

Join Whatsapp
Exit mobile version