ಸುಳ್ಯ, ಮೂಡುಬಿದಿರೆ, ಬೆಳ್ತಂಗಡಿಯಿಂದ ಅಭ್ಯರ್ಥಿಗಳು ಕಣಕ್ಕೆ…
ಮಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಎಐಸಿಸಿ ಶನಿವಾರ ಬೆಳಗ್ಗೆ ಬಿಡುಗಡೆ ಮಾಡಿದ್ದು, ಉಳ್ಳಾಲದಿಂದ ಯು.ಟಿ ಖಾದರ್, ಬಂಟ್ವಾಳದಿಂದ ರಮಾನಾಥ ರೈ ಸ್ಪರ್ಧೆ ಖಚಿತವಾಗಿದೆ.
ಇನ್ನು ಸುಳ್ಯದಿಂದ ಕೃಷ್ಣಪ್ಪ, ಮೂಡುಬಿದಿರೆಯಿಂದ ಮಿಥುನ್ ರೈ ಬೆಳ್ತಂಗಡಿ ಯಿಂದ ರಕ್ಷಿತ್ ಶಿವರಾಂಗೆ ಟಿಕೆಟ್ ನೀಡಲಾಗಿದೆ.
ಒಟ್ಟು 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾದಿಂದ ಕಡೆಗೂ ಸ್ಪರ್ಧೆ ಮಾಡುವುದು ಅಂತಿಮವಾಗಿದೆ. ಟೀ. ನರಸೀಪುರದಲ್ಲಿ ಹೆಚ್.ಸಿ.ಮಹದೇವಪ್ಪ ಹಾಗೂ ಕನಕಪುರದಿಂದ ಡಿ.ಕೆ. ಶಿವಕುಮಾರ್ ಸ್ಪರ್ಧೆ ಖಚಿತವಾಗಿದೆ.
ದೇವನಹಳ್ಳಿಯಿಂದ ಮುನಿಯಪ್ಪಗೆ ಟಿಕೆಟ್, ಬೆಂಗಳೂರು ರಾಜಾಜಿನಗರದಲ್ಲಿ ಪುಟ್ಟಣ್ಣ, ಆರ್ ಆರ್ ನಗರ ಕುಸುಮಾ ಹೆಚ್, ನರಸಿಂಹರಾಜ ತನ್ವಿರ್ ಸೇಠ್‌ಗೆ ಟಿಕೆಟ್ ಘೋಷಣೆಯಾಗಿದೆ. ಚಿಕ್ಕೋಡಿಯಿಂದ ಸದಲಗಾ ಗಣೇಶ ಹುಕ್ಕೇರಿಗೆ, ಕಾಗವಾಡ ಭರಮಗೌಡ ಆಲಗೌಡ ಕಾಗೆ, ಹುಕ್ಕೇರಿಯಿಂದ ಎ.ಬಿ ಪಾಟೀಲ್, ಯಮಕನಮರಡಿಯಿಂದ ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮೀಣದಿಂದ ಲಕ್ಷ್ಮಿ ಹೆಬ್ಬಾಳ್ಕರ್, ಖಾನಾಪುರದಿಂದ ಡಾ. ಅಂಜಲಿ ನಿಂಬಾಳ್ಕರ್, ಬೈಲಹೊಂಗಲದಿಂದ ಮಹಾಂತೇಶ ಶಿವಾನಂದ ಕೌಜಲಗಿ, ರಾಮದುರ್ಗದಿಂದ ಅಶೋಕ್ ಎಂ.ಪಟ್ಟಣ, ಜಮಖಂಡಿಯಿಂದ ಆನಂದ ಸಿದ್ದು ನ್ಯಾಮಗೌಡ ಅವರ ಹೆಸರು ಅಂತಿಮವಾಗಿದೆ.