Home ಟಾಪ್ ಸುದ್ದಿಗಳು “ಕಾಂಗ್ರೆಸ್‌ ಟೂಲ್‌ ಕಿಟ್‌” ಪ್ರಕರಣ : ದೆಹಲಿ ಪೊಲೀಸರಿಂದ ಟ್ವಿಟರ್‌ ಇಂಡಿಯಾ ಮುಖ್ಯಸ್ಥನ ವಿಚಾರಣೆ

“ಕಾಂಗ್ರೆಸ್‌ ಟೂಲ್‌ ಕಿಟ್‌” ಪ್ರಕರಣ : ದೆಹಲಿ ಪೊಲೀಸರಿಂದ ಟ್ವಿಟರ್‌ ಇಂಡಿಯಾ ಮುಖ್ಯಸ್ಥನ ವಿಚಾರಣೆ

ನವದೆಹಲಿ : “ಕಾಂಗ್ರೆಸ್‌ ಟೂಲ್‌ ಕಿಟ್”‌ ಪ್ರಕರಣಕ್ಕೆ ಸಂಬಂಧಿಸಿ ಟ್ವಿಟರ್‌ ಇಂಡಿಯಾ ಮುಖ್ಯಸ್ಥರನ್ನು ದೆಹಲಿ ಪೊಲೀಸರು ಕಳೆದ ತಿಂಗಳು ವಿಚಾರಣೆ ನಡೆಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಟ್ವಿಟರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್‌ ಮಹೇಶ್ವರಿ ಅವರನ್ನು ಮೇ 31ರಂದು ಬೆಂಗಳೂರಿನಲ್ಲಿ ದೆಹಲಿ ಪೊಲೀಸ್‌ ನ ವಿಶೇಷ ಘಟಕ ಪ್ರಶ್ನಿಸಿತ್ತು ಎಂದು ವರದಿ ತಿಳಿಸಿದೆ.

ಕಾಂಗ್ರೆಸ್‌ ಟೂಲ್‌ ಕಿಟ್‌ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮುಖಂಡ ಸಂಬಿತ್‌ ಪಾತ್ರಾರ ಟ್ವೀಟ್‌ ಕುರಿತಂತೆ ದೆಹಲಿ ಪೊಲೀಸರ ತಂಡ ದೆಹಲಿ, ಗುರ್ಗಾಂವ್‌ ನ ಟ್ವಿಟರ್‌ ಕಚೇರಿಗಳಿಗೆ ಭೇಟಿ ನೀಡಿದ್ದ ಒಂದು ವಾರದ ಬಳಿಕ ಈ ವಿಚಾರಣೆ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಸರಕಾರ ಕೋವಿಡ್‌ ನಿರ್ವಹಣೆಯಲ್ಲಿ ವಿಫಲವಾಗಿರುವ ಬಗ್ಗೆ ಪ್ರಶ್ನಿಸಲಾಗಿರುವುದನ್ನು “ಕಾಂಗ್ರೆಸ್‌ ಟೂಲ್‌ ಕಿಟ್” ಎಂದು ಟ್ವೀಟ್‌ ಮಾಡಿದ್ದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾರ ಟ್ವೀಟ್‌ ಅನ್ನು “ಮ್ಯಾನಿಪುಲೇಟೆಡ್‌ ಮೀಡಿಯಾ” ಲೇಬಲ್‌ ಲಗತ್ತಿಸಲಾಗಿತ್ತು ಎಂದು ಪೊಲೀಸರು ಪ್ರಶ್ನಿಸಿದ್ದರು ಎನ್ನಲಾಗಿದೆ.

Join Whatsapp
Exit mobile version