Home ಟಾಪ್ ಸುದ್ದಿಗಳು ರಾಮ ಮಂದಿರ ಕಾಮಗಾರಿಯನ್ನು ಕಾಂಗ್ರೆಸ್ ಪೂರ್ಣಗೊಳಿಸಲಿದೆ: ಡಾ ಜಿ. ಪರಮೇಶ್ವರ್

ರಾಮ ಮಂದಿರ ಕಾಮಗಾರಿಯನ್ನು ಕಾಂಗ್ರೆಸ್ ಪೂರ್ಣಗೊಳಿಸಲಿದೆ: ಡಾ ಜಿ. ಪರಮೇಶ್ವರ್

ತುಮಕೂರು: ರಾಮ ಮಂದಿರ ಕಾಮಗಾರಿ 2024ರವರೆಗೂ ಪೂರ್ಣಗೊಳ್ಳದಿದ್ದರೆ 2024ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಂದಿರದ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಮಾಜಿ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ ಜಿ.ಪರಮೇಶ್ವರ್ ತಿಳಿಸಿದ್ದಾರೆ.


ತುಮಕೂರಿನಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣಕ್ಕೆ ನಾನು ವೈಯಕ್ತಿಕವಾಗಿ 10 ಸಾವಿರ ರೂ.ದೇಣಿಗೆ ನೀಡಿದ್ದೇನೆ. ಏಕೆಂದರೆ ಶ್ರೀರಾಮ ಬಿಜೆಪಿಗೆ ಸೇರಿದ ವ್ಯಕ್ತಿ ಅಲ್ಲ. ರಾಮ ಮಂದಿರ ನಿರ್ಮಾಣಕ್ಕೆ ಸಾವಿರಾರು ಕೋಟಿ ಸಂಗ್ರಹಿಸಲಾಗಿದೆ. ಆ ಹಣ ಎಲ್ಲಿ ಹೋಗಿದೆ, ಯಾರಾದರೂ ಲೆಕ್ಕ ಕೊಟ್ಟಿದ್ದಾರಾ?. 2024ರವರೆಗೂ ರಾಮಮಂದಿರ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಕಾಂಗ್ರೆಸ್ ಸರ್ಕಾರ ಏಕೆ ಪೂರ್ಣಗೊಳಿಸಬಾರದು? ಎಂದು ಅವರು ಪ್ರಶ್ನಿಸಿದರು.
ಪಂಜಾಬ್ನಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ದಲಿತ ಸಿಎಂ ಬೇಕೆಂದು ಕೇಳುವಂತಾಗಬಹುದು ಎಂದು ಪರಮೇಶ್ವರ್ ಹೇಳಿದರು.

Join Whatsapp
Exit mobile version