Home ಟಾಪ್ ಸುದ್ದಿಗಳು ಗೃಹಮಂತ್ರಿಯಾಗಿದ್ದಾಗ ಸಮಾಜಘಾತುಕ ಶಕ್ತಿಗಳ ಪ್ರಕರಣ ಹಿಂಪಡೆಯುವ ಭರವಸೆ, ಸಿಎಂ ಆದಮೇಲೆ ಶಾಂತಿಭಂಗಕ್ಕೆ ಪ್ರಚೋದನೆ: ಬೊಮ್ಮಾಯಿ ವಿರುದ್ಧ...

ಗೃಹಮಂತ್ರಿಯಾಗಿದ್ದಾಗ ಸಮಾಜಘಾತುಕ ಶಕ್ತಿಗಳ ಪ್ರಕರಣ ಹಿಂಪಡೆಯುವ ಭರವಸೆ, ಸಿಎಂ ಆದಮೇಲೆ ಶಾಂತಿಭಂಗಕ್ಕೆ ಪ್ರಚೋದನೆ: ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು: ಗೃಹಮಂತ್ರಿಯಾಗಿದ್ದಾಗ ಸಮಾಜಘಾತುಕ ಶಕ್ತಿಗಳ ಪ್ರಕರಣ ಹಿಂಪಡೆಯುವ ಭರವಸೆ. ಸಿಎಂ ಆದಮೇಲೆ ಶಾಂತಿಭಂಗಕ್ಕೆ ಮತ್ತು ಅನೈತಿಕ ಪೊಲೀಸ್ಗಿರಿಗೆ ಪ್ರಚೋದನೆ. ಬೊಮ್ಮಾಯಿ ಅವರೇ, ಉದ್ಯೋಗ ಸೃಷ್ಟಿಸಿ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಬದಲು ಅಮಾಯಕ ಯುವಕರನ್ನು ಚುನಾವಣಾ ಲಾಭದ ಗಲಭೆಗೆ ಬಳಸಿಕೊಳ್ಳುವ ದುಷ್ಟ ಯೋಚನೆ ನಿಮಗೇಕೆ? ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.


ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಮುಖ್ಯಮಂತ್ರಿ ನೀಡಿರುವ ಹೇಳಿಕೆಯ ವೀಡಿಯೋವನ್ನು ಟ್ವೀಟ್ ಗೆ ಲಗತ್ತಿಸಿದೆ.
ರಾಜ್ಯದಲ್ಲಿ ಸಮಾಜಘಾತುಕ ಸಂಘಟನೆಗಳು ಶಸ್ತ್ರಾಸ್ತ್ರ ಹಂಚಿವೆ, ಮಾರಕಾಯುಧಗಳನ್ನು ಹಿಡಿದು ಮೆರವಣಿಗೆ ನಡೆಸಿವೆ, ಯಾವ ಧಾರ್ಮಿಕ ಸಂಪ್ರದಾಯವೂ ಅಲ್ಲದ ಈ ಬಗೆಯ ಕೃತ್ಯಗಳನ್ನು ಏಕಾಏಕಿ ಹುಟ್ಟು ಹಾಕಿದ್ದೇಕೆ? ಇದಕ್ಕೆ ಅನುಮತಿ ಕೊಟ್ಟವರು ಯಾರು? ಪೊಲೀಸರು ಮತ್ತು ಜಿಲ್ಲಾಡಳಿತವನ್ನು ಕಟ್ಟಿ ಹಾಕಿದವರು ಯಾರು ಬೊಮ್ಮಾಯಿಯವರೇ ? ಎಂದು ಪ್ರಶ್ನಿಸಲಾಗಿದೆ.

Join Whatsapp
Exit mobile version