Home ಟಾಪ್ ಸುದ್ದಿಗಳು ಕೋವಿಡ್ ಸಾವಿಗೆ ಕಾಂಗ್ರೆಸ್ ಕಾರಣವೆಂದ ಸಂಸದ ನಳಿನ್ ಕಟೀಲ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪಕ್ಷದಿಂದ ಪ್ರತಿಭಟನೆ

ಕೋವಿಡ್ ಸಾವಿಗೆ ಕಾಂಗ್ರೆಸ್ ಕಾರಣವೆಂದ ಸಂಸದ ನಳಿನ್ ಕಟೀಲ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪಕ್ಷದಿಂದ ಪ್ರತಿಭಟನೆ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೊರೋನ ಸಾವಿಗೆ ಕಾಂಗ್ರೆಸ್ ಪಕ್ಷದ ಹಿಂದಿನ ಆಡಳಿತವೇ ಕಾರಣ ಕಾಂಗ್ರೆಸ್ ಪಕ್ಷ ಕೊಲೆಗಡುಕ ಪಕ್ಷ ಎಂದು ನೀಡಿರುವ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ವತಿಯಿಂದ ಕಟೀಲ್ ಭಾವಚಿತ್ರವನ್ನ ದಹಿಸಿ ಪ್ರತಿಭಟನೆ ನಡೆಸಿದ್ದಾರೆ.

ದೇಶದ ಜನರನ್ನು ಇಂದು ಕೊಲ್ಲುತ್ತಿರುವವರು ಬಿಜೆಪಿಯ ದುರಾಡಳಿತದಿಂದ ಎಂಬುದನ್ನು ನಳಿನ್ ಕುಮಾರ್ ಕಟೀಲ್ ಮೊದಲು ಅರ್ಥೈಸಿಕೊಳ್ಳಬೇಕು  ಹಾಗೂ ಕೊರೋನ ಸಂಕಷ್ಟವನ್ನು ನಿವಾರಿಸಲು ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರಕಾರ ಕೂಡಲೇ ನೈತಿಕ ಹೊಣೆ ಹೊತ್ತು  ತೊಲಗಬೇಕು.

 ನಳಿನ್ ಕುಮಾರ್ ಕಟೀಲ್ ಒಬ್ಬ ಅನಾಗರಿಕ ರಾಜಕಾರಣಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ಬಿಜೆಪಿ ಪಕ್ಷದ ದುರಂತ ದೇಶದ ಜನರು ಕೊರೋನಾ ಸಂಕಷ್ಟದಲ್ಲಿ ನರಳಿ ಸಾಯುತ್ತಿರುವ ಸಂದರ್ಭದಲ್ಲಿ ಮತ್ತೊಂದು ಪಕ್ಷವನ್ನು ಟೀಕಿಸುವ ಅರ್ಹತೆ ನಳಿನ್ ಕುಮಾರ್ ಕಟೀಲ್ ಗೆ ಇದೆಯೇ ಎಂಬುದನ್ನು ಕಟೀಲ್ ಮೊದಲು ಅರ್ಥೈಸಿಕೊಳ್ಳಬೇಕು, ದೇಶದಲ್ಲೇ ಕೊರೋನ ತಡೆಗಟ್ಟಲು ವಿಫಲವಾಗಿರುವ ಮೋದಿಯ  ದುರಾಡಳಿತ  ಈಗ ವಿಶ್ವಕ್ಕೆ  ಬಹಿರಂಗವಾಗಿದೆ. ಇಂಥ ದುರಾಡಳಿತ ನೀಡಿ ಜನರನ್ನ ನಿತ್ಯ ಸಾಯುವ ಪರಿಸ್ಥಿತಿಗೆ ತಂದು ನಿಲ್ಲಿಸಿರುವುದು ಬಿಜೆಪಿ ಪಕ್ಷ ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕು

ಈ ರೀತಿಯ ಹೇಳಿಕೆ ನೀಡಿ  ಕಾಂಗ್ರೆಸ್ ಪಕ್ಷವನ್ನು ಟೀಕಿಸಿ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಬೇಡಿ ಕೂಡಲೇ ದೇಶದ ಜನರ ಬಳಿ ಕ್ಷಮೆ ಕೋರಿ ಆಡಳಿತ ನಡೆಸಲು ನಮಗೆ ಅರ್ಹತೆ ಯೋಗ್ಯತೆ ಇಲ್ಲವೆಂದು ತಿಳಿಸಿ ಮೊದಲು ಇಲ್ಲಿಂದ ತೊಲಗಿ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ರೇಸ್ ಕೋರ್ಸ್ ರಸ್ತೆ ಕಾಂಗ್ರೆಸ್ ಭವನದ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ನಳಿನ್ ಕುಮಾರ್ ಕಟೀಲ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖಂಡರುಗಳಾದ ಎಸ್. ಮನೋಹರ್, ಜಿ.ಜನಾರ್ಧನ್, ಎ.ಆನಂದ್, ಎಂಎ ಸಲೀಂ, ಚಂದ್ರಶೇಖರ್,  ಮಹೇಶ್ ಭಾಗವಹಿಸಿದ್ದರು.

Join Whatsapp
Exit mobile version