ಟಿ ಶರ್ಟ್ ಧರಿಸಿ ಬಂದ ಕಾಂಗ್ರೆಸ್ ಶಾಸಕ ಸದನದಿಂದ ಹೊರಕ್ಕೆ

Prasthutha|

ಗುಜರಾತ್ ಕಾಂಗ್ರೆಸ್ ಶಾಸಕ ವಿಮಲ್ ಚುಡಾಸಮಾ ಅವರನ್ನು ಟಿ ಶರ್ಟ್ ಹಾಕಿದ್ದಕ್ಕಾಗಿ ಸೋಮವಾರ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರು ಸದನದಿಂದ ಹೊರಹಾಕಿದ್ದಾರೆ.

- Advertisement -

ಈ ವೇಳೆ ಶಾಸಕರು ಘನತೆ ಕಾಪಾಡಿಕೊಳ್ಳಬೇಕು ಮತ್ತು ಸದನದಲ್ಲಿ ಟಿ-ಶರ್ಟ್ ಧರಿಸುವುದನ್ನು ತಡೆಯಬೇಕು ಎಂದು ಸ್ಪೀಕರ್ ಮನವಿ ಮಾಡಿದ್ದಾರೆ. ಆದರೆ ಪ್ರತಿಪಕ್ಷದ ನಾಯಕರು ಸದನಕ್ಕೆ ಸದಸ್ಯರು ಹಾಜರಾಗುವುದನ್ನು ನಿಷೇಧಿಸುವ ಯಾವುದೇ ನಿಯಮವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಒಂದು ವಾರದ ಹಿಂದೆಯಷ್ಟೇ ಸ್ಪೀಕರ್ ತ್ರಿವೇದಿ ಅವರು ಮೊದಲ ಬಾರಿಗೆ ಶಾಸಕ ಚುಡಾಸಮಾ ಅವರನ್ನು ಟಿ ಶರ್ಟ್ ಧರಿಸಿ ಸದನಕ್ಕೆ ಬರಬಾರದೆಂದು ಎಚ್ಚರಿಕೆ ನೀಡಿದ್ದರು ಮತ್ತು  ಶಾಸಕರು ತಮ್ಮ ಘನತೆ ಮತ್ತು ಅಲಂಕಾರವನ್ನು ಕಾಪಾಡಿಕೊಳ್ಳಲು ಶರ್ಟ್ ಅಥವಾ ಕುರ್ತಾ ಧರಿಸಬೇಕು ಎಂದು ಸ್ಪೀಕರ್ ಅಭಿಪ್ರಾಯಪಟ್ಟಿದ್ದರು ಎನ್ನಲಾಗಿದೆ. ಆದರೆ ಅದನ್ನೂ ಮೀರಿ ಮತ್ತೊಮ್ಮೆ ಟೀ ಶರ್ಟ್ ಧರಿಸಿ ಸದನಕ್ಕೆ ಬಂದ ಶಾಸಕ ಚುಡಾಸಮಾ ಅವರನ್ನು ಸದನದಿಂದ ಹೊರಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

Join Whatsapp