Home ಟಾಪ್ ಸುದ್ದಿಗಳು ಉಚಿತ ಪೆಟ್ರೋಲ್ ಹಾಕಿಸಿ ಜನ ಸೇರಿಸುವ ಅನಿವಾರ್ಯತೆ ಕಾಂಗ್ರೆಸ್‌‌ಗಿಲ್ಲ: ಮೊಯಿದೀನ್ ಬಾವಾ

ಉಚಿತ ಪೆಟ್ರೋಲ್ ಹಾಕಿಸಿ ಜನ ಸೇರಿಸುವ ಅನಿವಾರ್ಯತೆ ಕಾಂಗ್ರೆಸ್‌‌ಗಿಲ್ಲ: ಮೊಯಿದೀನ್ ಬಾವಾ

ಮಂಗಳೂರು: ಉಚಿತ ಪೆಟ್ರೋಲ್ ಹಾಕಿಸಿ ಜನ ಸೇರಿಸುವ ಅನಿವಾರ್ಯತೆ ಕಾಂಗ್ರೆಸ್‌‌ಗಿಲ್ಲ ಎಂದು ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದೀನ್ ಬಾವಾ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಲವ್ ಜಿಹಾದ್ ಮಾಡಿದರೆ ಬಿಡುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರು ಬೆದಕಿಗೆ ಹಾಕಿದ್ದಾರೆ. ಹಾಗಾದರೆ ರ್‍ಯಾಲಿಯಲ್ಲಿದ್ದ ಕಾಂಗ್ರೆಸ್ ಮುಖಂಡರು, ಸಾವಿರಾರು ಸಂಖ್ಯೆಯ ಹಿಂದೂ ಮುಸ್ಲಿಂ ಕ್ರೈಸ್ತ ಕಾರ್ಯಕರ್ತರು ಲವ್ ಜಿಹಾದ್ ಮಾಡುತ್ತಾರಾ? ಇದಕ್ಕೆ ಉತ್ತರಿಸಿ ಎಂದು ಪ್ರಶ್ನಿಸಿದ್ದಾರೆ.

ಉಚಿತ ಪೆಟ್ರೋಲ್ ಹಾಕಿಸಿ ಜನ ಸೇರಿಸುವ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕಿಲ್ಲ. ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಭರತ್ ಶೆಟ್ಟಿ ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಸುರತ್ಕಲ್ ನಲ್ಲಿ ಮನೆ ಸುಟ್ಟುಹೋದ ಪ್ರಕರಣದಲ್ಲಿ ಮಾನವೀಯ ನೆಲೆಯಲ್ಲಿ ನಾನು ಹೋಗಿ 25 ಸಾವಿರ ನೀಡಿದ್ದೆ, ಮೊನ್ನೆ ರಸ್ತೆ ಗುಂಡಿಗೆ ಬಲಿಯಾದ ಆತೀಶ್ ಕುಟುಂಬಕ್ಕೆ ಒಂದು ಲಕ್ಷ ರೂ., ಕೊಲೆಗೀಡಾದ ಜಲೀಲ್ ಕುಟುಂಬಕ್ಕೆ ಒಂದು ಲಕ್ಷ ರೂ., ಕುಕ್ಕರ್ ಸ್ಫೋಟದಲ್ಲಿ ಗಾಯಗೊಂಡ ಪುರುಷೋತ್ತಮ್ ಪೂಜಾರಿಗೆ 1 ಲಕ್ಷ ರೂ. ಕೊಟ್ಟಿದ್ದೇನೆ. ಮಾನ್ಯ ಶಾಸಕರು ಕೇವಲ ಫೋಟೋ ತೆಗೆಯಲು ಹೋಗಿ ಬರುತ್ತಾರೆ. ಇವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಹೇಳಿದ್ದಾರೆ‌

Join Whatsapp
Exit mobile version