Home ಟಾಪ್ ಸುದ್ದಿಗಳು ಮೇಯರ್ ಸ್ಥಾನ ಕೊಡಿಸುವುದಾಗಿ ಕೋಟಿ‌ ಕೋಟಿ ವಂಚನೆ: ಕಾಂಗ್ರೆಸ್ ಮುಖಂಡ ಆಸೀಫ್ ನಿಂದ ದೂರು ದಾಖಲು

ಮೇಯರ್ ಸ್ಥಾನ ಕೊಡಿಸುವುದಾಗಿ ಕೋಟಿ‌ ಕೋಟಿ ವಂಚನೆ: ಕಾಂಗ್ರೆಸ್ ಮುಖಂಡ ಆಸೀಫ್ ನಿಂದ ದೂರು ದಾಖಲು

ಬಳ್ಳಾರಿ: ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಕೊಡಿಸುವುದಾಗಿ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರ ಬಾಮೈದ, ಕಾಂಗ್ರೆಸ್ ಮುಖಂಡ ಟಿ.ಜಿ.ಎರಿಸ್ವಾಮಿ ಪಾಲಿಕೆಯ ಸದಸ್ಯರೊಬ್ಬರಿಂದ ಕೋಟಿ ಕೋಟಿ ಹಣ ಪಡೆದು ವಂಚಿಸಿದ್ದಾರೆ ಎಂದು
ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ ಎನ್.ಎಂ.ಡಿ.ಆಸೀಫ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಮೇಯರ್ ಸ್ಥಾನ ಕೊಡಿಸುವುದಾಗಿ ನಂಬಿಸಿ 3.5 ಕೋಟಿ ರೂಪಾಯಿ ಪಡೆದು, ಇದೀಗ ಯಾವುದೇ ಸ್ಥಾನ ಕೊಡಿಸದೇ ಮೋಸ ಮಾಡಿದ್ದಾರೆ. ಹಣ ವಾಪಸ್​ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆಂದು ಎಂದು ಆಸೀಫ್ ಬಾಷಾ ಅವರು ಕೌಲ್ ಬಜಾರ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

Join Whatsapp
Exit mobile version