Home ಟಾಪ್ ಸುದ್ದಿಗಳು ಸಂವೇದನಾಶೀಲತೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್: ಸಿ.ಟಿ.ರವಿ

ಸಂವೇದನಾಶೀಲತೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್: ಸಿ.ಟಿ.ರವಿ

ಚಿಕ್ಕಮಗಳೂರು : ಸಂವೇದನಾಶೀಲತೆ ಇಲ್ಲದ ಸ್ಥಿತಿಗೆ ಕಾಂಗ್ರೆಸ್ಸಿನ ಎಲ್ಲಾ ನಾಯಕರು ಬಂದಿರೋದು ದುರಾದೃಷ್ಟ. ಯಾರಿಗೂ ವಿವೇಚನೆಯೇ ಇಲ್ಲದಿರೋದು ಆ ಪಕ್ಷದ ಅವನತಿಗೆ ಸಾಕ್ಷಿಯಾಗಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡ್ಮೂರು ದಿನದ ಮಳೆಗೆ 13 ಜನ ಅಕಾಲಿಕ ಮೃತ್ಯವಿಗೀಡಾಗಿದ್ದಾರೆ. ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟು ಸರಿ. ಕಾಂಗ್ರೆಸ್ ಸಂವೇದನಾಶೀಲತೆ ಕಳೆದುಕೊಳ್ತಾ ಎಂದು ಪ್ರಶ್ನಿಸಿದರು.

ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರೆಲ್ಲಾ ಬಂದಿದ್ದಾರೆ. ಸಂಕಷ್ಟದಲ್ಲಿದ್ದಾಗ ಹಾಡಿ-ಹೊಗಳೋದು ಮಾನವೀಯತೆ ಇರೋರ್ಗೆ ಶೋಭೆ ತರೋದಲ್ಲ. ಬಿಜೆಪಿ ಸರ್ಕಾರವೂ 3 ವರ್ಷದ ತುಂಬಿದ್ದಕ್ಕೆ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕರ್ತ ಪ್ರವೀಣ್ ಸಾವನ್ನಪ್ಪಿದ್ದಕ್ಕೆ ಎಲ್ಲರೂ ಒಮ್ಮತದ ನಿರ್ಧಾರ ಮಾಡಿ ರದ್ದು ಮಾಡಿದ್ದೇವೆ. ಅಂದು ನಮಗೆ ಪ್ರಶ್ನಿಸಿದ್ದರು, ಇಂದು ಸೂತಕದ ಮನೆಯಲ್ಲಿ ಸಂಭ್ರಮ ಅಂತ ಕೆಲವರಿಗಾದರೂ ಅನ್ನಿಸಬೇಕಿತ್ತು ಎಂದು ಹೇಳಿದರು.

ಒಗ್ಗಟ್ಟು ಎಷ್ಟು ದಿನ ಇರುತ್ತೆ ಅನ್ನೋದು ಪ್ರಶ್ನಾರ್ಥಕ ಸಂಗತಿ. ಇವತ್ತು ಕೈಹಿಡಿದು ಒಗ್ಗಟ್ಟು ತೋರ್ಸಿದ್ರು, ಇದೇ ಜನ ಪರಮೇಶ್ವರ್ ಸೋಲಿಸಿದ್ದಾರೆ. ಒಗ್ಗಟ್ಟು ಎಷ್ಟು ದಿನ ಇರುತ್ತೆ ಅನ್ನೋದನ್ನ ನೋಡೋಣ ಎಂದರು.

ರಾಮಮಂದಿರ ಕಟ್ಟುವಾಗ ಶಾಲೆ ಕಟ್ಟಿ ಎಂದು ಹೇಳುತ್ತಿದ್ದರು. ಈಗ ಹತ್ರತ್ರ 100 ಕೋಟಿ ಖರ್ಚು ಮಾಡಿದ್ದಾರೆ. ಗುಡ್ಡಕುಸಿದು, ಅತಿವೃಷ್ಟಿಯಿಂದ ಹತ್ತಾರು ಜನ ಪ್ರಾಣಕಳೆದುಕೊಂಡಿದ್ದಾರೆ. ಅಂತಹ ಜನರಿಗೆ ಬದುಕು ಕಟ್ಟಿಕೊಡಬಹುದಿತ್ತು ಎಂದು ಹೇಳಿದರು.

ದೇವರು ಸಿದ್ದರಾಮಯ್ಯನವರಿಗೆ ಆಯಸ್ಸು-ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಶುಭಹಾರೈಸಿದರು.

Join Whatsapp
Exit mobile version