ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಆರೋಗ್ಯದಲ್ಲಿ ಏರು ಪೇರಾಗಿದ್ದು, ಅವರನ್ನು ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋನಿಯಾ ಗಾಂಧಿ ಜ್ವರ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿದೆ.
ಚೆಸ್ಟ್ ಮೆಡಿಸನ್ ನ ಹಿರಿಯ ಸಲಹೆಗಾರ ಡಾ. ಅರುಪ್ ಬಸು ಮತ್ತು ಅವರ ತಂಡದ ಆರೈಕೆಯಲ್ಲಿದ್ದಾರೆ.
ಕಳೆದ ವರ್ಷ ಕೋವಿಡ್ – 19 ಸೋಂಕಿಗೊಳಗಾಧ ಬಳಿಕ ಕಾಂಗ್ರೆಸ್ ಮಾಜಿ ಅಧಿನಾಯಕಿ ಅನಾರೋಗ್ಯಕ್ಕೊಳಗಾಗುತ್ತಲೇ ಇದ್ದಾರೆ. ಕೆಲ ತಿಂಗಳ ಹಿಂದಷ್ಟೇ ತಪಾಸಣೆಗೆಂದು ಅವರು ವಿದೇಶಕ್ಕೆ ತೆರಳಿದ್ದರು.