Home ಟಾಪ್ ಸುದ್ದಿಗಳು ಲೈಂಗಿಕ ಕಿರುಕುಳ ಪ್ರಕರಣ: ಕಾಂಗ್ರೆಸ್ ಮುಖಂಡ ಮನೋಜ್ ಕರ್ಜಗಿ ಬಂಧನ

ಲೈಂಗಿಕ ಕಿರುಕುಳ ಪ್ರಕರಣ: ಕಾಂಗ್ರೆಸ್ ಮುಖಂಡ ಮನೋಜ್ ಕರ್ಜಗಿ ಬಂಧನ

ಹುಬ್ಬಳ್ಳಿ: ಲೈಂಗಿಕ ಕಿರುಕುಳ ಆರೋಪದಡಿಯಲ್ಲಿ  ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತ ಮನೋಜ್ ಕರ್ಜಗಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

ತನ್ನದೇ ಒಡೆತನದ ಲೇ ಮೋರ್ಜ್ ಬ್ಯೂಟಿ ಸ್ಪಾ ದಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಮನೋಜ್ ಕರ್ಜಗಿಯನ್ನು ಬಂಧಿಸಲಾಗಿದೆ.

ಯುವತಿ ನೀಡಿದ ದೂರಿನ ಆಧಾರದ ಮೇಲೆ ಎಫ್ ಐಆರ್ ದಾಖಲಿಸಲಾಗಿದ್ದು, ಯುವತಿ ಕಡೆಯವರು ಮನೋಜ್ ಕರ್ಜಗಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಯುವತಿ ಕಡೆಯ ನಾಲ್ವರನ್ನೂ  ಪೊಲೀಸರು ಬಂಧಿಸಿದ್ದಾರೆ.

ತನ್ನ ಮೇಲೆ ಸುಳ್ಳು ಆರೋಪ ಹೊರೆಸಿದ್ದಾರೆ ಎಂದು ಆರೋಪಿಸಿ ಮನೋಜ್ ಕರ್ಜಗಿ ಪ್ರತಿದೂರು ದಾಖಲಿಸಿದ್ದು, ಸದ್ಯ ಈ ಎರಡೂ ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Join Whatsapp
Exit mobile version