Home ಟಾಪ್ ಸುದ್ದಿಗಳು ಮಂತ್ರಿಯ ಮನೆ ಉಳಿಸಲು ರೈಲು ಯೋಜನೆಯ ಪರಿಷ್ಕರಣೆ: ಕಾಂಗ್ರೆಸ್ ಆರೋಪ

ಮಂತ್ರಿಯ ಮನೆ ಉಳಿಸಲು ರೈಲು ಯೋಜನೆಯ ಪರಿಷ್ಕರಣೆ: ಕಾಂಗ್ರೆಸ್ ಆರೋಪ

ತಿರುವನಂತಪುರ: ಕೇರಳದ ಮೀನುಗಾರಿಕೆ, ಸಂಸ್ಕೃತಿ ಮತ್ತು ಯುವ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಅವರು ತಮ್ಮ ಮನೆ ಮತ್ತು ಆಸ್ತಿಯನ್ನು ಉಳಿಸಲು ಸಿಲ್ವರ್ಲೈನ್ ಸೆಮಿ-ಹೈ-ಸ್ಪೀಡ್ ರೈಲು ಕಾರಿಡಾರ್ ಯೋಜನೆಯ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಸದಸ್ಯ ತಿರುವಂಚೂರ್ ರಾಧಾಕೃಷ್ಣನ್ ಬುಧವಾರ ಆರೋಪಿಸಿದ್ದಾರೆ.

ಬುಧವಾರ ತಿರುವಂಚೂರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, “(ಸಿಲ್ವರ್ಲೈನ್) ಜೋಡಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಚೆರಿಯನ್ ಕಳೆದ ದಿನ ಹೇಳಿದ್ದರು. ಅವನು ಹೇಳಿದ್ದು ತಪ್ಪು, ಅವರ ಮನೆ ಇರುವ ಪ್ರದೇಶ ಸೇರಿದಂತೆ ಚೆಂಗನ್ನೂರಿನಲ್ಲಿನ ಜೋಡಣೆಯನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಕೆ-ರೈಲ್ ವೆಬ್ಸೈಟ್ ನಲ್ಲಿನ ಪ್ರಸ್ತುತ ಜೋಡಣೆಯು ಡಿಸೆಂಬರ್ ನಲ್ಲಿ ಪ್ರದರ್ಶಿಸಿದ್ದಕ್ಕಿಂತ ಭಿನ್ನವಾಗಿದೆ .“ಹಳೆಯ ಮಾರ್ಗ ನಕ್ಷೆಯಲ್ಲಿ ಮುಳಕ್ಕುಳ ಪಂಚಾಯತ್ ಕಚೇರಿಯ ಎಡಭಾಗದಲ್ಲಿ ಅಲೈನ್ ಮೆಂಟ್ ಇತ್ತು. ಈಗ, ಅದು ಬಲಭಾಗದಲ್ಲಿದೆ, ”ಎಂದು ಹೇಳಿದರು. ತಮ್ಮ ವಾದವನ್ನು ಬಲಪಡಿಸಲು ಎರಡು ಜೋಡಣೆ ನಕ್ಷೆಗಳನ್ನು ಸಹ ತಯಾರಿಸಿದ್ದಾರೆ.

ಆದಾಗ್ಯೂ, ಚೆರಿಯನ್ ಆರೋಪವನ್ನು ನಿರಾಕರಿಸಿದ್ದಾರೆ ಮತ್ತು ಯೋಜನೆಗಾಗಿ ತನ್ನ ಮನೆಯನ್ನು ಒಪ್ಪಿಸಲು ಸಿದ್ಧ ಎಂದು ಹೇಳಿದ್ದಾರೆ.

Join Whatsapp
Exit mobile version