ಜಾಮೂನು ಕೊಟ್ಟು ನಂತರ ವಿಷ ಕೊಡೋದು ಕಾಂಗ್ರೆಸ್ : ಅಶ್ವಥ್ ನಾರಾಯಣ

Prasthutha|

ಬೆಂಗಳೂರು: ಬೇರೆ ಪಕ್ಷದ ನಾಯಕರು ಬಿಜೆಪಿಗೆ ಬಂದರೆ ಮೊದಲು ಜಾಮೂನು ಕೊಡುತ್ತಾರೆ, ನಂತರ ವಿಷ ಕೊಡುತ್ತಾರೆ ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಸ್ವ ಪಕ್ಷದ ವಿರುದ್ಧವೇ ತಮ್ಮ ಅವಸಮಾಧಾನವನ್ನು ಹೊರ ಹಾಕಿದ ಬೆನ್ನಲ್ಲೇ ಶಾಸಕ ಅಶ್ವತ್ ನಾರಾಯಣ್ ತಿರುಗೇಟು ನೀಡಿದ್ದು ಜಾಮೂನು ಕೊಟ್ಟು ನಂತರ ವಿಷ ಕೊಡುವುದು ಕಾಂಗ್ರೆಸ್ ಪಕ್ಷದಲ್ಲಿ ಎಂದಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಟಿ ಸೋಮಶೇಖರ್ ಅವರಿಗೆ ಪಕ್ಷ ಎಲ್ಲಾ ಕೊಟ್ಟಿದೆ ಆದರೆ ಯಾರನ್ನು ಗೌರವದಿಂದ ನಡೆಸಿಕೊಳ್ಳಲ್ಲ. ಅವರು ಸೋಮಶೇಖರ್ ಯಾವ ಹಿನ್ನೆಲೆಯಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

Join Whatsapp
Exit mobile version