ಬೆಂಗಳೂರು: ಹಿಜಾಬ್ ನಲ್ಲಿ ಮುಖ ಮುಚ್ಚಿಕೊಳ್ಳುವುದಷ್ಟೇ ಅಲ್ಲ, ಸರ್ಕಾರವೊಂದರ ವೈಫಲ್ಯಗಳನ್ನೂ ಮುಚ್ಚಿಕೊಳ್ಳಬಹುದು ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ‘ಹಿಜಾಬ್’ನಲ್ಲಿ ಮುಖ ಮುಚ್ಚಿಕೊಳ್ಳುವುದಷ್ಟೇ ಅಲ್ಲ, ಸರ್ಕಾರವೊಂದರ ವೈಫಲ್ಯಗಳನ್ನೂ ಮುಚ್ಚಿಕೊಳ್ಳಬಹುದು ಎಂದು ಬಿಜೆಪಿ ತೋರಿಸಿಕೊಡುತ್ತಿದೆ. ವಿಷಯವಲ್ಲದ ವಿಷಯವನ್ನು ವಿವಾದವನ್ನಾಗಿಸಿ ರಾಜ್ಯದಲ್ಲಿ ಕೋಮು ಕೇಂದ್ರಿತ ವಿಚಾರಗಳನ್ನು ಸದಾ ಚರ್ಚೆಯಲ್ಲಿಡಲು ಹವಣಿಸುತ್ತಿದೆ ಎಂದು ಬರೆದೆಕೊಂಡಿದೆ.