Home ಟಾಪ್ ಸುದ್ದಿಗಳು ಕಾಂಗ್ರೆಸ್‍ ಗೆ ಈ ಜನ್ಮದಲ್ಲಿ ಮೇಕೆದಾಟು ಯೋಜನೆ ಮಾಡಲು ಸಾಧ್ಯವಿಲ್ಲ: ಅಶ್ವಥ್ ನಾರಾಯಣ್ ಸವಾಲು

ಕಾಂಗ್ರೆಸ್‍ ಗೆ ಈ ಜನ್ಮದಲ್ಲಿ ಮೇಕೆದಾಟು ಯೋಜನೆ ಮಾಡಲು ಸಾಧ್ಯವಿಲ್ಲ: ಅಶ್ವಥ್ ನಾರಾಯಣ್ ಸವಾಲು

ಬೆಂಗಳೂರು: ಮೇಕೆದಾಟು ಯೋಜನೆ ಕಾಂಗ್ರೆಸ್ ಪಕ್ಷದಿಂದ ಈ ಜನ್ಮದಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಅಶ್ವಥ್ ನಾರಾಯಣ ಸವಾಲು ಹಾಕಿದ್ದಾರೆ. ಕಾಂಗ್ರೆಸ್‍ನ ಎರಡನೇ ಹಂತದ ಪಾದಯಾತ್ರೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಪ್ರೇರಿತವೆಂದು ವಾಗ್ದಾಳಿ ನಡೆಸಿದರು.

ನೀರಿಗೂ ಕಾಂಗ್ರೆಸ್ ರಾಜಕೀಯ ಲೇಪ ಹಚ್ಚುತ್ತಿದೆ. ಕುಡಿಯುವ ನೀರಿಗೂ ರಾಜಕೀಯ ಬಣ್ಣ ಹಚ್ಚುತ್ತಿದೆ ಎಂದು ಕಿಡಿಕಾರಿದರು. ನಾಡಿನ ಜನರು ನೆಲ, ಜಲ, ಭಾಷೆ ಬಂದಾಗ ಎಲ್ಲರೂ ಒಂದಾಗುತ್ತಾರೆ. ಆದರೆ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. 75 ವರ್ಷಗಳಲ್ಲಿ ಕಾಂಗ್ರೆಸ್ ಮೇಕೆದಾಟಿಗೆ ಏನೂ ಮಾಡಲಿಲ್ಲ ಎಂದರು

ಇನ್ನು ಮೇಕೆದಾಟು ಅನುಷ್ಠಾನ ಮಾಡಲು ನಮ್ಮ ಸರಕಾರ ಬದ್ದವಾಗಿದೆ. ಡಿಎಂಕೆ ಜೊತೆ ಕಾಂಗ್ರೆಸ್ ಕೈಜೋಡಿಸಿದೆ. ತಮಿಳುನಾಡಿನಲ್ಲಿ ಅವರದ್ದೇ ಸರ್ಕಾರ ಇದೆ. ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬಂದು ಇದನ್ನು ಮಾಡಲು ಸಾಧ್ಯವೇ ಇಲ್ಲ ಎಂದರು

Join Whatsapp
Exit mobile version