Home ಟಾಪ್ ಸುದ್ದಿಗಳು ದುಷ್ಟಶಕ್ತಿಯ ನಾಶದ ಸೂಚಕವಾಗಿ ರಾವಣನ ಬದಲಾಗಿ ಇಡಿ, ಸಿಬಿಐ, ಐಟಿ ಪ್ರತಿಕೃತಿ ದಹಿಸಿದ ಕಾಂಗ್ರೆಸ್

ದುಷ್ಟಶಕ್ತಿಯ ನಾಶದ ಸೂಚಕವಾಗಿ ರಾವಣನ ಬದಲಾಗಿ ಇಡಿ, ಸಿಬಿಐ, ಐಟಿ ಪ್ರತಿಕೃತಿ ದಹಿಸಿದ ಕಾಂಗ್ರೆಸ್

ಗುಜರಾತ್: ದಸರಾ ಪ್ರಯುಕ್ತ ದುಷ್ಟಶಕ್ತಿಯ ನಾಶದ ಸೂಚಕವಾಗಿ ಗುಜರಾತ್ ನ ಭುಜ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಹಣದುಬ್ಬರದ ಪ್ರತಿಕೃತಿಯನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕೇಂದ್ರ ಸರ್ಕಾರ ಸಂವಿಧಾನಾತ್ಮಕ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ದೇಶದಲ್ಲಿ ರಾಜಕೀಯ ವಿರೋಧಿ ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿ ನಾಯಕರು ಘೋಷಣೆ ಕೂಗಿದರು. ಬಳಿಕ ಪ್ರತಿಭಟನೆಯ ರೂಪದಲ್ಲಿ ರಾವಣನ ಬದಲಿಗೆ ಇಡಿ, ಸಿಬಿಐ ಮತ್ತು ಹಣದುಬ್ಬರ ಪ್ರತಿಕೃತಿಗಳನ್ನು ದಹಿಸಲಾಗಿದೆ.

Join Whatsapp
Exit mobile version