ಪೆನ್ ಡ್ರೈವ್ ಬಿಡುಗಡೆಗೆ ಕಾಂಗ್ರೆಸ್ಸಿನವರಿಂದಲೇ ತಡೆ: ಹೆಚ್ ಡಿಕೆ

Prasthutha|

ಬೆಂಗಳೂರು: ಪೆನ್ ಡ್ರೈವ್ ಬಿಡುಗಡೆಯನ್ನು ಕಾಂಗ್ರೆಸ್ ನವರೇ ತಡೆಯುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

- Advertisement -


ಸ್ಫೀಕರ್ ಖಾದರ್ ಅವರಿಗೆ ಕೃಷಿ ಇಲಾಖೆಯ ವರ್ಗಾವಣೆಗೆ ನಿಗದಿ ಮಾಡಿದ ದರಪಟ್ಟಿ ಮತ್ತು ಪೆನ್ ಡ್ರೈವ್ ವಿಚಾರದ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇನ್ನೂ ತುಂಬಾ ವಿಚಾರ ಸಿಗಲಿದೆ. ಈಗಲೇ ಆತುರಪಡಬೇಡಿ. ಕಾಂಗ್ರೆಸ್ ನಲ್ಲಿ ವಿಕೆಟ್ ಬೀಳಬೇಕು ಎಂದು ಕೆಲವರು ಕಾಯುತ್ತಿದ್ದಾರೆ. ಇದು ಸಾಮಾನ್ಯ ಪೆನ್ ಡ್ರೈವ್ ಅಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಒಳಜಗಳಕ್ಕೆ ಬೆಂಕಿ ಹಚ್ಚಿದ್ದಾರೆ.

ನಾನು ಎಲ್ಲೂ ಕದ್ದು ಓಡಿ ಹೋಗುವುದಿಲ್ಲ. ಹಿಟ್ ಆಂಡ್ ರನ್ ಪ್ರಶ್ನೆಯೇ ಇಲ್ಲ. ಈ ಹಿಂದೆ 2008-2013ರ ಅವಧಿಯಲ್ಲಿನ ಹಗರಣಗಳ ಬಗ್ಗೆ ನಾನು ದಾಖಲೆ ಇಟ್ಟು ಮಾಡಿದ್ದೇನೆ ಎಂದು ತಿಳಿಸಿದರು.