ಜಾರಕಿ ‘ಲೀಲೆ’ । ಕಾಂಗ್ರೆಸ್ – ಬಿಜೆಪಿ ಟ್ವೀಟ್ ಸಮರ ತಾರಕಕ್ಕೆ !

Prasthutha|

ಮಾಜಿ ಬಿಜೆಪಿ ಸಚಿವ ಜಾರಕಿಹೊಳಿ ಸಿಡಿ ಪ್ರಕರಣ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರುವ ಮುನ್ನ ಬಾಂಬೆ ರೆಸಾರ್ಟಿಗೆ ತೆರಳಿದ ಮಂತ್ರಿಗಳು ಕೋರ್ಟ್ ಮೊರೆ ಹೋದ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದಂತೆ ಕಣ್ಣಿನಲ್ಲಿ ನೋಡಲಾಗದ ಸಿಡಿಗಳು ಇವೆಯಂತೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ನೀವು ತಡೆಯಾಜ್ಞೆ ತರುವುದಿಲ್ಲವೇ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಈ ಕುರಿತಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಟ್ವೀಟ್ ಸಮರದಲ್ಲಿ ತೊಡಗಿದೆ.

- Advertisement -

“ತಮ್ಮದೇ ಪಕ್ಷದ ಶಾಸಕರ ಹಿತಾಸಕ್ತಿ ಕಾಪಾಡಲು ಸಾಧ್ಯವಾಗದ ಕಾಂಗ್ರೆಸ್‌, ತಮ್ಮ ಶಾಸಕರು ಅನ್ಯ ಪಕ್ಷ ಸೇರಿದಾಗ ತನ್ನ ಮೇಲಿನ ನಿಷ್ಕ್ರಿಯತೆಯನ್ನು ಮುಚ್ಚಿಹಾಕಲು ಸೃಷ್ಟಿಸಿದ ಪದವೇ ಆಪರೇಷನ್ ಕಮಲ. ದೇವರಾಜ ಅರಸು ಸರ್ಕಾವನ್ನು ಈ ಹಿಂದೆ ಭಾರತೀಯ ಕಾಂಗ್ರೆಸ್ ಪಕ್ಷದ ದೆಹಲಿ ನಾಯಕರು ಬುಡಮೇಲುಗೊಳಿಸಿದ್ದಕ್ಕೆ ಏನೆನ್ನುತ್ತೀರಿ?. ಅದು, ಆಪರೇಷನ್‌ ಹಸ್ತವೇ” ಎಂದು ಬಿಜೆಪಿ ತಿರುಗೇಟು ನೀಡಿದೆ.

ಮತ್ತೆ ಟ್ವೀಟ್ ಮೂಲಕ ಉತ್ತರಿಸಿದ ಕಾಂಗ್ರೆಸ್ “ಹೌದು.. ಹೌದು. ಬಾಂಬೆಗೆ ಕರೆದುಕೊಂಡು ಹೋಗಿ ತಾವು ತುಂಬಾ ಚೆನ್ನಾಗಿ ಹಿತಾಸಕ್ತಿ ಕಾಪಾಡಿರುವುದು ನಿಮ್ಮ ಸಚಿವರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರಲ್ಲಿಯೇ ತಿಳಿಯುತ್ತಿದೆ. ಇಡೀ ರಾಜ್ಯ ಛೀ.. ಥೂ.. ಎನ್ನುತ್ತಿದೆ ನಿಮ್ಮ ಸಿಡಿ ಸರ್ಕಾರವನ್ನು ನೋಡಿ. ನಿಮ್ಮವರೇ ನಿಮಗೆ ಬ್ಲಾಕ್ಮೇಲ್ ಜನತಾ ಪಾರ್ಟಿ ಎಂದಿದ್ದೇಕೆ ಎಂದು ಈಗ ತಿಳಿಯುತ್ತಿದೆ” ಎಂಬುದಾಗಿ ಕಾಂಗ್ರೆಸ್ ಟ್ವಿಟರ್ ನಲ್ಲಿ ತಿರುಗೇಟು ನೀಡಿದೆ.

ಒಟ್ಟಿನಲ್ಲಿ ರಾಜಕಾರಣಿಗಳ ದುಸ್ಥಿತಿಗೆ ರಾಜ್ಯದ ಜನತೆ ಬೇಸತ್ತುಹೋಗಿದ್ದು, ಇವೆಲ್ಲವೂ ಯಾವಾಗ ಕೊನೆಯಾಗುತ್ತೋ ಎಂದು ಕಾದುನೋಡುತ್ತಿದೆ.

- Advertisement -