ಸಿ.ಎಂ.ಇಬ್ರಾಹಿಂ ಬಂಡಾಯದ ಹಿಂದೆ ಕಾಂಗ್ರೆಸ್ ಕೈವಾಡ: ಜಿಟಿ ದೇವೇಗೌಡ

Prasthutha|

ಬೆಂಗಳೂರು: ಸಿ.ಎಂ.ಇಬ್ರಾಹಿಂ ಬಂಡಾಯದ ಹಿಂದೆ ಕಾಂಗ್ರೆಸ್ ನ ಕೈವಾಡ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಹೇಳಿದ್ದಾರೆ.

- Advertisement -


ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ರಾಹಿಂ ಬಂಡಾಯದ ಹಿಂದೆ ಕಾಂಗ್ರೆಸ್ನ ಕೈವಾಡ ಇದೆ. ಚುನಾವಣೆಯೊಳಗೆ ಜೆಡಿಎಸ್ ಮುಗಿಸಲು ಹೋರಾಟ ಮಾಡುತ್ತಿದೆ, ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಮಾತು ಕೇಳಿ ನೀವು ದುಡುಕಬೇಡಿ. ನಿಮ್ಮ ಜೊತೆ ಜೆಡಿಎಸ್ ವರಿಷ್ಠರು ಇದ್ದಾರೆ ಎಂದು ಕಿವಿ ಮಾತು ಹೇಳಿದರು.


ಇನ್ನು ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷ ಇಬ್ಭಾಗವಾಗುವ ಬಗ್ಗೆ ಮಾತನಾಡಿದ ಜಟಿಡಿ, ಜೆಡಿಎಸ್ ಪಕ್ಷ ಇಬ್ಭಾಗವಾಗುವ ಸನ್ನಿವೇಶ ಈಗ ಉದ್ಭವ ಆಗಲ್ಲ. ಜೆಡಿಎಸ್ ರಾಜ್ಯದಲ್ಲಿರುವ ಪ್ರಾದೇಶಿಕ ಪಕ್ಷ. ಈ ಪಕ್ಷ ಗಟ್ಟಿಯಾಗಿ ನಿಲ್ಲುತ್ತೆ. ಸಿ.ಎಂ. ಇಬ್ರಾಹಿಂ ಅವರ ಜೊತೆ ಮಾತನಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.