Home ಟಾಪ್ ಸುದ್ದಿಗಳು ಛತ್ತೀಸ್ಗಢದಲ್ಲೂ ಉಚಿತ 200 ಯುನಿಟ್ ವಿದ್ಯುತ್ ಘೋಷಿಸಿದ ಕಾಂಗ್ರೆಸ್

ಛತ್ತೀಸ್ಗಢದಲ್ಲೂ ಉಚಿತ 200 ಯುನಿಟ್ ವಿದ್ಯುತ್ ಘೋಷಿಸಿದ ಕಾಂಗ್ರೆಸ್

ಛತ್ತೀಸ್ಗಢ: ಪಂಚರಾಜ್ಯಗಳಲ್ಲಿ ಚುನಾವಣಾ ಕಾವು ಏರುತ್ತಿದ್ದು, ಪಕ್ಷಗಳು ಮತದಾರರನ್ನು ಓಲೈಸಲು ಕಸರತ್ತು ಮಾಡುತ್ತಿವೆ. ಕರ್ನಾಟಕದಂತೆ ಛತ್ತೀಸ್ಗಢದಲ್ಲೂ ಉಚಿತ 200 ಯುನಿಟ್ ವಿದ್ಯುತ್ ನೀಡುವುದಾಗಿ ಪ್ರಿಯಾಂಕ ಗಾಂಧಿ ವಾದ್ರಾ ಘೋಷಿಸಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕ, ಧರ್ಮದ ಹೆಸರಿನಲ್ಲಿ ನಿಮ್ಮನ್ನು ದಾರಿ ತಪ್ಪಿಸುವವರಿಗೆ ಮತ ಹಾಕುತ್ತೀರಾ , ಸಮಸ್ಯೆಗಳನ್ನು ಮಾತ್ರ ತರುತ್ತೀರಾ? ನಿಮ್ಮ ಜೀವನದಲ್ಲಿ, ಅಥವಾ ನಿಮ್ಮ ಅಭಿವೃದ್ಧಿ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುವ ಪಕ್ಷಕ್ಕೆ ಮತ ನೀಡುತ್ತೀರಾ ಎಂದು ಕೇಳಿದ್ದಾರೆ.

ತಮ್ಮ ಪಕ್ಷ ಅಧಿಕಾರ ಉಳಿಸಿಕೊಂಡರೆ ಸ್ವ-ಸಹಾಯ ಗುಂಪುಗಳ ಸಾಲ ಮನ್ನಾ, ಹೊಸ ಯೋಜನೆಯಡಿಯಲ್ಲಿ ಸಬ್ಸಿಡಿ ಅಡುಗೆ ಅನಿಲ ಸಿಲಿಂಡರ್ ಮತ್ತು ರಸ್ತೆ ಅಪಘಾತಗಳ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ಸೇರಿದಂತೆ ಹಲವಾರು ಕ್ರಮಗಳ ಭರವಸೆ ನೀಡಿದ್ದಾರೆ.

ಖೈರಗಢ್ ವಿಧಾನಸಭಾ ಕ್ಷೇತ್ರದ ಜಲಬಂಧದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ಸುಮಾರು 6,000 ಸರ್ಕಾರಿ ಹೈಯರ್ ಸೆಕೆಂಡರಿ ಮತ್ತು ಹೈಸ್ಕೂಲ್‌ಗಳನ್ನು ಸ್ವಾಮಿ ಆತ್ಮಾನಂದ ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮ ಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದರು. ಕಾಂಗ್ರೆಸ್ ಅಧಿಕಾರವನ್ನು ಉಳಿಸಿಕೊಂಡರೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಅನ್ನು ಅವರು ಭರವಸೆ ನೀಡಿದರು.

“ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮರು ಆಯ್ಕೆಯಾದರೆ, ಮಹಿಳೆಯರಿಗೆ ಪ್ರತಿ ಗ್ಯಾಸ್ ಸಿಲಿಂಡರ್‌ಗೆ 500 ರೂ ಸಬ್ಸಿಡಿ ನೀಡಲು ಮಹತಾರಿ ನ್ಯಾಯ್ ಯೋಜನೆಯನ್ನು ಪ್ರಾರಂಭಿಸುತ್ತದೆ” ಎಂದು ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದರು. ಸ್ವಸಹಾಯ ಗುಂಪುಗಳ ಸಾಲಗಳು ಮತ್ತು ಸಕ್ಷಮ್ ಯೋಜನೆ ಅಡಿಯಲ್ಲಿ ಮಹಿಳೆಯರು ಪಡೆದ ಸಾಲಗಳನ್ನು ಮನ್ನಾ ಮಾಡಲಾಗುವುದು ಎಂದು ಅವರು ಹೇಳಿದರು.

ರಸ್ತೆ ಅಪಘಾತ ಮತ್ತು ಇತರ ಹಠಾತ್ ಅಪಘಾತಗಳಲ್ಲಿ ಸಂತ್ರಸ್ತರಾದವರಿಗೆ ಮುಖ್ಯಮಂತ್ರಿಗಳ ವಿಶೇಷ ಆರೋಗ್ಯ ನೆರವು ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದೂ ಭರವಸೆಯನ್ನು ಕೂಡ ಕಾಂಗ್ರೆಸ್ ವತಿಯಿಂದ ಜನರಿಗೆ ಕೊಡಲಾಗಿದೆ.

Join Whatsapp
Exit mobile version