ಬೆಂಗಳೂರು: ರಾಜ್ಯ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್, ತನ್ನ 17 ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಬಿಡುಗಡೆಮಾಡಿದೆ.
ಟಿಕೆಟ್ ಹಂಚಿಕೆ ಸಂಬಂಧ ಗೊಂದಲವಿರುವ ಬೀದರ್, ಕೋಲಾರ, ಬೆಂಗಳೂರು ನಗರ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಮಂಗಳವಾರ ಅಂತಿಮಗೊಳಿಸುವ ಸಾಧ್ಯತೆಯಿದೆ. ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿದೆ. ಬಳ್ಳಾರಿಯಿಂದ ಹಾಲಿ ಸದಸ್ಯ ಕೆ.ಸಿ. ಕೊಂಡಯ್ಯ,, ಹುಬ್ಬಳ್ಳಿ–ಧಾರವಾಡ, ಗದಗ, ಹಾವೇರಿ ಕ್ಷೇತ್ರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರಿಗೆ ಟಕೆಟ್ ನೀಡಲಾಗಿದೆ.
17 ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ.
ಬೆಳಗಾವಿ: ಚೆನ್ನರಾಜ್ ಹಟ್ಟಿಹೊಳಿ
ಉತ್ತರಕನ್ನಡ -ಭೀಮಣ್ಣ ನಾಯ್ಕ್
ಧಾರವಾಡ: ಸಲೀಂ ಅಹಮದ್
ರಾಯಚೂರು: ಶರಣಗೌಡ ಪಾಟೀಲ್
ಚಿತ್ರದುರ್ಗ -ಬಿ.ಸೋಮಶೇಖರ್
ಶಿವಮೊಗ್ಗ: ಆರ್. ಪ್ರಸನ್ನ ಕುಮಾರ್
ಚಿಕ್ಕಮಗಳೂರು: ಗಾಯಿತ್ರಿ ಶಾಂತೇಗೌಡ
ಹಾಸನ: ಎಂ. ಶಂಕರ್
ತುಮಕೂರು: ಆರ್. ರಾಜೇಂದ್ರ
ಮಂಡ್ಯ: ದಿನೇಶ್ ಗೂಳಿಗೌಡ
ಕೊಡಗು: ಮಂಥರ್ ಗೌಡ