Home ಟಾಪ್ ಸುದ್ದಿಗಳು NIAಯಿಂದ ಜಮ್ಮು-ಕಾಶ್ಮೀರದಲ್ಲಿ ನಾಪತ್ತೆಯಾದವರ ಕುರಿತ ಸೂಕ್ಷ್ಮ ದಾಖಲೆಗಳ ದುರ್ಬಳಕೆ ಸಾಧ್ಯತೆ | ಎಪಿಡಿಪಿ ಕಳವಳ

NIAಯಿಂದ ಜಮ್ಮು-ಕಾಶ್ಮೀರದಲ್ಲಿ ನಾಪತ್ತೆಯಾದವರ ಕುರಿತ ಸೂಕ್ಷ್ಮ ದಾಖಲೆಗಳ ದುರ್ಬಳಕೆ ಸಾಧ್ಯತೆ | ಎಪಿಡಿಪಿ ಕಳವಳ

ನವದೆಹಲಿ : ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ದಾಳಿ ಮಾಡಿ, ಕೆಲವೊಂದು ದಾಖಲೆಗಳನ್ನು ವಶಪಡಿಸಿಕೊಂಡಿರುವುದರಿಂದ ಅಂತಹ ಸೂಕ್ಷ್ಮ ದಾಖಲೆಗಳ ದುರ್ಬಳಕೆಯಾಗುವ ಸಾಧ್ಯತೆಯಿದೆ ಎಂದು ನಾಪತ್ತೆಯಾದವರ ಹೆತ್ತವರ ಸಂಸ್ಥೆ (ಎಪಿಡಿಪಿ) ಕಳವಳ ವ್ಯಕ್ತಪಡಿಸಿದೆ.

ತಮ್ಮ ಸಂಸ್ಥೆಯ ಹೈದರ್ ಪೊರ ಮತ್ತು ಶ್ರೀನಗರ ಕಚೇರಿಗಳಲ್ಲಿ ಎನ್ ಐಎ ದಾಳಿ ನಡೆಸಿ, ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇವುಗಳಲ್ಲಿ ಕಣಿವೆ ರಾಜ್ಯದಲ್ಲಿ ಭದ್ರತಾ ಸಿಬ್ಬಂದಿಯಿಂದ ಮಾನವ ಹಕ್ಕು ಉಲ್ಲಂಘನೆಗಳಾದ ಕುರಿತ ಅತ್ಯಂತ ಸೂಕ್ಷ್ಮ ಮಾಹಿತಿಗಳು ಈ ದಾಖಲೆಗಳು ಒಳಗೊಂಡಿದ್ದವು ಎಂದು ಸಂಸ್ಥೆ ತಿಳಿಸಿದೆ.

ಎಪಿಡಿಪಿಗೆ ಸೇರಿದ ಬೆಂಗಳೂರು ಕಚೇರಿ ಮೇಲೂ ಮಂಗಳವಾ ಎನ್ ಐಎ ದಾಳಿ ನಡೆಸಿತ್ತು. ಮಾನವ ಹಕ್ಕು ಹೋರಾಟಗಾರ್ತಿ ಪರ್ವೀನಾ ಅಹಂಗರ್ ಈ ಸಂಸ್ಥೆಯ ಸ್ಥಾಪಕಿಯಾಗಿದ್ದಾರೆ.

Join Whatsapp
Exit mobile version