Home ಕರಾವಳಿ ಪಂಚಾಯತ್ ಸದಸ್ಯರ ಬಗ್ಗೆ ವಾಟ್ಸಪ್ ಗ್ರೂಪ್ ನಲ್ಲಿ ಕಳ್ಳತನ ಆರೋಪ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಪಂಚಾಯತ್ ಸದಸ್ಯರ ಬಗ್ಗೆ ವಾಟ್ಸಪ್ ಗ್ರೂಪ್ ನಲ್ಲಿ ಕಳ್ಳತನ ಆರೋಪ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ : ಸಜೀಪ ಮುನ್ನೂರು ಗ್ರಾಮ ಪಂಚಾಯತ್ ಗೆ ವಿತರಣೆಗೆ ಬಂದ ಗಿಡ, ಸಸಿ ಗಳನ್ನು ಗ್ರಾಮಸ್ಥರಿಗೆ ತಿಳಿಸದೆ ಪಂಚಾಯತ್ ಸದಸ್ಯರು ಮನೆಗೆ ಕೊಂಡೋಯ್ಯುತ್ತಿದ್ದಾರೆ ಎಂದು “ಸಲಾಂ ಫ್ರೆಂಡ್ಸ್” ಎಂಬ ವಾಟ್ಸಪ್ ಗ್ರೂಪ್ ನಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ,

ಬಳಿಕ ನಡೆದ ಚರ್ಚೆಯಲ್ಲಿ ಸಸಿಗಳನ್ನು ಪಂಚಾಯತ್ ಸದಸ್ಯರು ಕದ್ದು ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ

ಗಿಡ,ಸಸಿಗಳು ಬೇಕಾದವರು ಆಧಾರ್ ಕಾರ್ಡ್ ತಂದು ತೆಗೆದುಕೊಂಡು ಹೋಗಬಹುದು ಎಂದು ಪಂಚಾಯತ್ ಅಧಿಕೃತರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ, ಹಲವರು ಬಂದು ಸಸಿಗಳನ್ನು ತೆಗೆದುಕೊಂಡುಹೋಗಿದ್ದಾರೆ ಆದರೆ ವಾಟ್ಸಪ್ ಗ್ರೂಪ್ ನಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಸಸಿಗಳನ್ನು ಕದ್ದು ಸದಸ್ಯರು ಮಾರಾಟ ಮಾಡಿದ್ದಾರೆ ಎಂದು ದೂರಿದ್ದಾರೆ. ಇದರಿಂದ ಪಂಚಾಯತ್ ಸದಸ್ಯರ ವರ್ಚಸ್ಸಿಗೆ ದಕ್ಕೆ ಉಂಟಾಗಿದ್ದು ಈ ಬಗ್ಗೆ ಸೈಬರ್ ಕ್ರೈಮ್ ಅಡಿಯಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿದೆ

Join Whatsapp
Exit mobile version