Home ಕರಾವಳಿ ಆಝಾನ್ ವಿರುದ್ಧ ಅಪಪ್ರಚಾರ ಮಾಡಿದ್ದ ಪ್ರಚೋದನಕಾರಿ ಭಾಷಣಗಾರ್ತಿ ವಿರುದ್ಧ ದೂರು ದಾಖಲು

ಆಝಾನ್ ವಿರುದ್ಧ ಅಪಪ್ರಚಾರ ಮಾಡಿದ್ದ ಪ್ರಚೋದನಕಾರಿ ಭಾಷಣಗಾರ್ತಿ ವಿರುದ್ಧ ದೂರು ದಾಖಲು

ಬೆಳ್ತಂಗಡಿ: ಅಲ್ಲಾಹು ಅಕ್ಬರ್ ಎಂದರೆ ಹಿಂದೂಗಳನ್ನು ಕೊಲ್ಲಿ ಎಂದು ಸಮಾಜಕ್ಕೆ ತಪ್ಪು ಮಾಹಿತಿ ನೀಡಿ ಸಮುದಾಯಗಳ ನಡುವೆ ವೈಷಮ್ಯ ಮೂಡಿಸಲು ಪ್ರಯತ್ನಿಸಿದ ಆರೋಪದಲ್ಲಿ ಹಾರಿಕಾ ಮಂಜುನಾಥ್ ವಿರುದ್ಧ ದೂರು ನೀಡಲಾಗಿದೆ.

ಬೆಳ್ತಂಗಡಿಯಲ್ಲಿ ಸೋಮವಾರ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಕಿನ್ಯಮ್ಮ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗೀತಾ ಜಯಂತಿ ಸೌರ್ಯ ಪಥಸಂಚಲನ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಾರಿಕಾ ಮಂಜುನಾಥ್ ಅವರು ಮುಸ್ಲಿಮರ ಆಝಾನ್ ( ಮಸೀದಿಯಲ್ಲಿ 5 ಬಾರಿ ಮೊಳಗುವ ಸಂದೇಶ) ಬಗ್ಗೆ ದುರುದ್ದೇಶಪೂರಿತವಾಗಿ ತಪ್ಪು ವ್ಯಾಖ್ಯಾನ ನೀಡಿದ್ದರು. ಇದರಿಂದ ಸಮಾಜಕ್ಕೆ ತಪ್ಪು ಮಾಹಿತಿ ರವಾನೆಯಾಗುತ್ತದೆ ಎಂದು ಪೆರಾಲ್ದರಕಟ್ಟೆ ಮಸೀದಿ ಸಮಿತಿಯಿಂದ ದೂರು ನೀಡಲಾಗಿತ್ತು

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp
Exit mobile version