2020ರಲ್ಲಿ ಕೋಮುಗಲಭೆ ಪ್ರಕರಣಗಳು ದ್ವಿಗುಣ: NCRB ವರದಿ

Prasthutha: September 17, 2021

ಹೊಸದಿಲ್ಲಿ: 2019ಕ್ಕೆ ಹೋಲಿಸಿದಾಗ ಕೋವಿಡ್ ಸೋಂಕಿನ ಹೊರತಾಗಿಯೂ 2020ರಲ್ಲಿ ಕೋಮುವಾದ ಹಾಗೂ ಧಾರ್ಮಿಕ ಗಲಭೆಯ ಪ್ರಕರಣಗಳು ದ್ವಿಗುಣಗೊಂಡಿದೆ ಎಂದು NCRB ವರದಿ ಮಾಡಿದೆ. 

ಕೋವಿಡ್ ಸೋಂಕಿನ ಕಾಲಘಟ್ಟದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿತ್ತು. ಸೀಮಿತ ಹೊರಾಂಗಣ ಚಟುವಟಿಕೆಗಳ ಹೊರತಾಗಿಯೂ ಕೋಮು ಗಲಭೆಯಲ್ಲಿ ಇಳಿಮುಖವಾಗಿಲ್ಲ ಎಂದು ಸರ್ಕಾರಿ ಅಂಕಿಅಂಶಗಳು ತಿಳಿಸಿವೆ.

ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ಪ್ರಕಾರ, 2020ರಲ್ಲಿ ದೇಶದಲ್ಲಿ 857 ಕೋಮುಗಲಭೆ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದೆ. 2019ರಲ್ಲಿ ಈ ಸಂಖ್ಯೆಯು 438 ಹಾಗೂ 2018ರಲ್ಲಿ 512ರಷ್ಟಾಗಿತ್ತು.

ಕೋವಿಡ್ ಸೋಂಕಿನಿಂದಾಗಿ 2020 ಮಾರ್ಚ್ 25ರಿಂದ ಮೇ ತಿಂಗಳವರೆಗೆ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿತ್ತು. 2020ರ ಜನವರಿಯಲ್ಲಿ ಈಶಾನ್ಯ ದೆಹಲ್ಲಿ ಪೌರತ್ವ ಕಾನೂನು ಹಾಗೂ ಕೋಮುಗಲಭೆಗೆ ಸಂಬಂಧಿಸಿದಂತೆ ಅನೇಕ ಪ್ರತಿಭಟನೆಗಳು ನಡೆದಿದ್ದವು ಎಂದು ವರದಿಯು ಉಲ್ಲೇಖಿಸಿದೆ.

2020ರಲ್ಲಿ 736 ಜಾತಿ ಸಂಘರ್ಷ ಪ್ರಕರಣಗಳು ದಾಖಲಾಗಿವೆ. 2019ರಲ್ಲಿ ಇದು 492 ಹಾಗೂ 2018ರಲ್ಲಿ 656 ಆಗಿತ್ತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!