Home ಟಾಪ್ ಸುದ್ದಿಗಳು ಕೋಮು ಗಲಭೆ, ಪ್ರಚೋದನೆಯ ಮೂಲಕ ಮತ ಪಡೆಯಲು ಸಾಧ್ಯವಿಲ್ಲ: ಜಿ.ಟಿ. ದೇವೇಗೌಡ

ಕೋಮು ಗಲಭೆ, ಪ್ರಚೋದನೆಯ ಮೂಲಕ ಮತ ಪಡೆಯಲು ಸಾಧ್ಯವಿಲ್ಲ: ಜಿ.ಟಿ. ದೇವೇಗೌಡ

ಹೊಸಪೇಟೆ: ಅಲ್ಪಸಂಖ್ಯಾತ ಮುಸ್ಲಿಮರು ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ನಾಯಕರು ಹಿಜಾಬ್ ವಿಚಾರವನ್ನು ಮುಂದಿಟ್ಟುಕೊಂಡು ಪ್ರಚೋದನಕಾರಿ ಹೇಳಿಕೆ ನೀಡುವುದನ್ನು ತಕ್ಷಣ ನಿಲ್ಲಿಸಲಿ. ಇದರಿಂದ ಮತವನ್ನು ಪಡೆಯಲು ಸಾಧ್ಯವಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಭಯ ಪಕ್ಷಗಳ ನಾಯಕರ ಪ್ರಚೋದನಾಕಾರಿ ಹೇಳಿಕೆಗಳಿಂದ ಜನ ಬೇಸತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಒಟ್ಟಾಗಿ ದೇಶ, ರಾಜ್ಯ ಮತ್ತು ಸಮಾಜದ ರಕ್ಷಣೆಗೆ ಒತ್ತು ನೀಡುವ ಹೇಳಿಕೆಗಳನ್ನು ನೀಡುವಂತಾಗಬೇಕು. ಹಿಂದೂ – ಮುಸ್ಲಿಮರು ಹಳ್ಳಿಗಳಲ್ಲಿ ಸೌಹಾರ್ದತೆಯಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ವಿನಾಕಾರಣ ತಮ್ಮ ರಾಜಕೀಯ ಬೇಳೆ ಬೇಯಿಸಲು ಕೋಮು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.

Join Whatsapp
Exit mobile version