Home ರಾಜ್ಯ ಸರ್ಕಾರಿ ಕಾರ್ಯಕ್ರಮದಲ್ಲಿ ಕೋಮುಸೌಹಾರ್ದ ಕೆಡಿಸುವ ಘೋಷಣೆ: ಗಾಯಕಿ ಲಕ್ಷ್ಮೀ ದುಬೆ ವಿರುದ್ಧ ದೂರು ನೀಡಿದ ಪಾಪ್ಯುಲರ್...

ಸರ್ಕಾರಿ ಕಾರ್ಯಕ್ರಮದಲ್ಲಿ ಕೋಮುಸೌಹಾರ್ದ ಕೆಡಿಸುವ ಘೋಷಣೆ: ಗಾಯಕಿ ಲಕ್ಷ್ಮೀ ದುಬೆ ವಿರುದ್ಧ ದೂರು ನೀಡಿದ ಪಾಪ್ಯುಲರ್ ಫ್ರಂಟ್

ವಿಜಯನಗರ: ಸರ್ಕಾರಿ ಕಾರ್ಯಕ್ರಮದಲ್ಲಿ ಹಿಂದುತ್ವದ ಪರ ಪ್ರಚೋದನಾಕಾರಿಯಾಗಿ ಹಾಡಿ, ಕೋಮು ಸೌಹಾರ್ದ ಕೆಡಿಸಲು ಪ್ರಯತ್ನಿಸಿದ ಗಾಯಕಿ ಲಕ್ಷ್ಮೀ ದುಬೆ ವಿರುದ್ಧ ಕ್ರಮಕೈಗೊಳ್ಳುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೊಸಪೇಟೆ ವತಿಯಿಂದ ಚಿತ್ತಡಗಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.


ಭಾನುವಾರ ವಿಜಯಪುರ ನೂತನ ಜಿಲ್ಲಾ ಉದ್ಘಾಟನೆಯ ಸಮಾರಂಭದಲ್ಲಿ, ವೇದಿಕೆಯಲ್ಲಿ ಹಾಡು ಹಾಡುತ್ತಿದ್ದ ಗಾಯಕಿ ಹಿಂದುತ್ವದ ಪರವಾಗಿ ಘೋಷಣೆ ಕೂಗಿದ್ದರು. ಇದರಿಂದ ಆಕ್ರೋಶಗೊಂಡ ಜಿಲ್ಲಾಧಿಕಾರಿ ಕಾರ್ಯಕ್ರಮವನ್ನು ಅರ್ಧದಲ್ಲೇ ನಿಲ್ಲಿಸಿದ್ದರು.

ಹಾಡಲು ಶುರು ಮಾಡಿದ ಗಾಯಕಿ ಲಕ್ಷ್ಮಿ ಹಾಡಿನ ಮಧ್ಯೆ, ಗೋ ಹತ್ಯೆಯನ್ನು ನಿಲ್ಲಿಸಿ, ಇದು ಪ್ರತಿ ಹಿಂದೂಗಳ ಮಾತೆ. ಹಿಂದೂಸ್ಥಾನದಲ್ಲಿ ಇರಬೇಕೆಂದರೆ ವಂದೇ ಮಾತರಂ ಹೇಳಬೇಕು ಎಂದು ಹೇಳಿದ್ದಲ್ಲದೆ, ಬಹಳ ದೇಶದ್ರೋಹಿಗಳು ಭಾರತದಲ್ಲಿ ಇದ್ದಾರೆ ಎಂದು ಅವರು ಹೇಳಿದ್ದಾರೆ.

ಶ್ರೀರಾಮನ ಮಂದಿರ ನಿರ್ಮಾಣದ ಬಗ್ಗೆ ಜನ ಹಲವು ವರ್ಷಗಳಿಂದ ಕನಸು ಕಾಣುತ್ತಿದ್ದರು. ಅದನ್ನು ಪ್ರಧಾನಿ ಮೋದಿಯವರು ಸಾಧ್ಯವಾಗಿಸಿದ್ದಾರೆ. ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಮಾಡಿದ್ದಾರೆ. ಮೋದಿಯವರಿಗೆ ಇಲ್ಲಿಂದಲೇ ಸಾಷ್ಟಾಂಗ ನಮಸ್ಕಾರ ಮಾಡುವೆ. ಭಾರತದಲ್ಲಿ ಇರುವ ಶತ್ರುಗಳನ್ನು ಒದ್ದೋಡಿಸುವ ಸಮಯ ಬಂದಿದೆ” ಎಂದು ಹೇಳಿದ್ದಾರೆ.
ಈ ವೇಳೆ ಬಹಳ ಸಿಟ್ಟಾದ ಜಿಲ್ಲಾಧಿಕಾರಿ ಅನಿರುದ್ಧ್ ಪಿ. ಶ್ರವಣ್ ಅವರು ಅವರ ಕಾರ್ಯಕ್ರಮ ನಿಲ್ಲಿಸಲು ಆದೇಶ ನೀಡಿದ್ದರು.
ಈ ನಿಟ್ಟಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಚಿತ್ತಡಗಿ ಪೊಲೀಸ್ ಠಾಣೆಯಲ್ಲಿ ಗಾಯಕಿ ವಿರುದ್ಧ ದೂರು ದಾಖಲಿಸಿದ್ದಾರೆ.

Join Whatsapp
Exit mobile version