ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ಲಭಿಸಿದೆ.
ವೇಟ್‌ಲಿಫ್ಟಿಂಗ್‌ನಲ್ಲಿ ಪುರುಷರ 67 ಕೆಜಿ ವಿಭಾಗದಲ್ಲಿ ಭಾರತದ 19 ವರ್ಷದ ಜೆರೆಮಿ ಲಾಲ್‌ರಿನುಂಗ ಒಟ್ಟು 300 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ್ದಾರೆ.
ಇದು ಭಾರತಕ್ಕೆ ಕೂಟದಲ್ಲಿ ಲಭಿಸುತ್ತಿರುವ ಐದನೇ ಪದಕವಾಗಿದೆ. ವಿಶೇಷವೆಂದರೆ ಐದೂ ಪದಕಗಳೂ ವೇಟ್‌ಲಿಫ್ಟಿಂಗ್ ವಿಭಾಗದಲ್ಲೇ ಲಭಿಸಿದೆ.