Home ಕರಾವಳಿ ರಸ್ತೆ ಬದಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯ ಮೃತದೇಹ ಸಾಗಿಸಿದ ಪೊಲೀಸ್ ಸಿಬ್ಬಂದಿಗೆ ಕಮಿಷನರ್’ರಿಂದ ಪ್ರಶಂಸನಾ ಪತ್ರ

ರಸ್ತೆ ಬದಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯ ಮೃತದೇಹ ಸಾಗಿಸಿದ ಪೊಲೀಸ್ ಸಿಬ್ಬಂದಿಗೆ ಕಮಿಷನರ್’ರಿಂದ ಪ್ರಶಂಸನಾ ಪತ್ರ

ಮಂಗಳೂರು: ರಸ್ತೆ ಬದಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯ ಮೃತದೇಹವನ್ನು ವೈದ್ಯಕೀಯ ಸಿಬ್ಬಂದಿಗಾಗಿ ಕಾಯದೆ ತಾವೇ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮಂಗಳೂರು ನಗರ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಸಿಬ್ಬಂದಿ ಸಂಪತ್ ಬಂಗೇರ ಅವರ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವ ಸಲ್ಲಿಸಿದ್ದಾರೆ.

ನವೆಂಬರ್ 9ರಂದು ಪುರಭವನ ಸಮೀಪದ ಮಿನಿ ವಿಧಾನಸೌಧ ಬಳಿಯಲ್ಲಿ ಅಪರಿಚಿತ ವಯಸ್ಸಿನ ವ್ಯಕ್ತಿಯ ಮೃತದೇಹ ಕಂಡುಬಂದಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ಸಂಪತ್ ಬಂಗೇರ ಅವರು ಮೃತದೇಹವನ್ನು ನೋಡಿದ್ದು, ತಕ್ಷಣ ಯಾರಿಗೂ ಕಾಯದೇ ಸಹೋದ್ಯೋಗಿಗಳ ನೆರವಿನೊಂದಿಗೆ ತಾವೇ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದರು.

ಇದನ್ನು ಗಮನಿಸಿದ್ದ ಪೊಲೀಸ್ ಆಯುಕ್ತರು, ಬಂಗೇರವನ್ನು ಅವರನ್ನು ತಮ್ಮ ಕಚೇರಿಗೆ ಕರೆಸಿ, ಅಭಿನಂದನೆ ಸಲ್ಲಿಸಿದ್ದಾರೆ. ಮಾತ್ರವಲ್ಲ ನಿಮ್ಮ ಕರ್ತವ್ಯ ಇದೇ ರೀತಿ ನಿರಂತರವಾಗಿ ಸಾರ್ವಜನಿಕ ಸೇವೆಯಲ್ಲಿ ಮುಂದುವರಿಯಲಿ. ಕಾರ್ಯತತ್ಪರತೆ ಮತ್ತು ಕರ್ತವ್ಯ ಪ್ರಜ್ಞೆಯು ಇತರರಿಗೆ ಮಾದರಿಯಾಗಲಿ ಎಂದು ಹಾರೈಸಿದ್ದಾರೆ.

Join Whatsapp
Exit mobile version