ಮಂಗಳೂರು: ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹಿನ್ನೆಲೆ ನಗರದಾದ್ಯಂತ ಪೊಲೀಸ್ ಪಥ ಸಂಚಲನ ನಡೆಯಿತು.
ನಗರದ ಕದ್ರಿಯ ಸರ್ಕ್ಯೂಟ್ ಹೌಸ್ ನಿಂದ ಹೊರಟು ಲಾಲ್ ಬಾಗ್, ಪಿವಿಎಸ್ ಮಾರ್ಗವಾಗಿ ಹಂಪನಕಟ್ಟೆವರೆಗೆ ಪಥ ಸಂಚಲನ ನಡೆಯಿತು.
ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಮುಂದಾಳತ್ವದಲ್ಲಿ ನಡೆದ ಪಥ ಸಂಚಲನದಲ್ಲಿ ಸುಮಾರು 400 ಕ್ಕೂ ಅಧಿಕ ಸಿಬ್ಬಂದಿಗಳು ಹಾಜರಿದ್ದರು.
ಪ್ರತಿಯೋರ್ವ ಅಧಿಕಾರಿ ಸಿಬ್ಬಂದಿಗಳು ಸಂಯಮದಿಂದ ವರ್ತಿಸುವಂತೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸೂಚನೆ ನೀಡಿದರು.