Home ಟಾಪ್ ಸುದ್ದಿಗಳು ಕಲಾವಿದರ ಬಳಿ ಕಮಿಷನ್ | ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ: ರಾಜೀವ ತಾರಾನಾಥ ಸ್ಪಷ್ಟನೆ

ಕಲಾವಿದರ ಬಳಿ ಕಮಿಷನ್ | ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ: ರಾಜೀವ ತಾರಾನಾಥ ಸ್ಪಷ್ಟನೆ

ಬೆಂಗಳೂರು: ‘ಯಾವ ಅಧಿಕಾರಿಯೂ ನನ್ನ ಬಳಿ ಬಂದಿಲ್ಲ’ ಎಂದು ಸರೋದ್ ವಾದಕ ಪಂ. ರಾಜೀವ ತಾರಾನಾಥ್ ಸ್ಪಷ್ಟನೆ ನೀಡಿದ್ದಾರೆ.


ದಸರಾ ಕಾರ್ಯಕ್ರಮದಲ್ಲಿ ಅವಕಾಶ ಒದಗಿಸಿ, ಹಣ ಬಿಡುಗಡೆ ಮಾಡಿಸಲು ಅಧಿಕಾರಿಗಳು ಕಮಿಷನ್ ಕೇಳಿದ ಆರೋಪ ಕುರಿತಂತೆ ಸ್ಪಷ್ಟನೆ ನೀಡಿರುವ ಸರೋದ್ ವಾದಕ ಪಂ. ರಾಜೀವ ತಾರಾನಾಥ್ ಅವರು, ‘ಯಾವ ಅಧಿಕಾರಿಯೂ ನನ್ನ ಬಳಿ ಬಂದಿಲ್ಲ’ ಎಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.


ಶನಿವಾರ ತಮ್ಮ ಮನೆಗೆ ಭೇಟಿ ನೀಡಿದ ಅಧಿಕಾರಿಗಳೊಂದಿಗೆ ಮಾತನಾಡಿದ ಪಂ. ತಾರಾನಾಥ ಅವರು, ‘ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ. ಅದೊಂದು ತಪ್ಪು ಹೇಳಿಕೆ. ಸಮಿತಿ ಕಡೆಯಿಂದಲೂ ಯಾರೂ ಬಂದಿಲ್ಲ’ ಎಂದಿದ್ದಾರೆ.


ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಹಿಂದೆ ಜಿಲ್ಲಾಡಳಿತ ಕೋರಿತ್ತು. ಆರೋಗ್ಯ ಸಮಸ್ಯೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಈಗ ನಿಮ್ಮ ಆರೋಗ್ಯ ಉತ್ತಮವಾಗಿದ್ದು, ಕಾರ್ಯಕ್ರಮ ನೀಡುತ್ತೀರಾ ಎಂಬ ಅಧಿಕಾರಿಗಳ ಕೋರಿಕೆಗೆ ಸಮ್ಮತಿಸಿದ ಪಂ. ತಾರಾನಾಥ, ‘ಬಂದು ಡಾನ್ಸ್ ಮಾಡುತ್ತೇನೆ’ ಎಂದು ಹೇಳಿದ್ದಾರೆ.

Join Whatsapp
Exit mobile version