ಟಿಪ್ಪು ಸುಲ್ತಾನ್ ವಿರುದ್ಧ ಅವಹೇಳನಕಾರಿ ಪೋಸ್ಟ್| ಪ್ರಕರಣ ದಾಖಲು

ಕೊಟ್ಟೂರು: ಟಿಪ್ಪು ಸುಲ್ತಾನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವ್ಯಕ್ತಿ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಟ್ಟೂರು ತಾಲೂಕಿನ ಹಾಳ್ಯಾ ಗ್ರಾಮದ ಶಾಂತೇಶ್ ಸುರಪುರ ಎಂಬ ವ್ಯಕ್ತಿ ಟಿಪ್ಪು ಸುಲ್ತಾನ್ ಮೈಸೂರಿನ ಟೈಗರ್ ಅಲ್ಲ, ಲೇಡೀಸ್ ಟೈಗರ್ (ಟಿಪ್ಪು ಸುಲ್ತಾನ್ ಮೈಸೂರಿನ ಹುಲಿ ಅಲ್ಲ, ಮಹಿಳೆಯರ ಹುಲಿ) ಎಂದು ಪೋಸ್ಟ್ ಮಾಡಿದ್ದ.

- Advertisement -

ಇದು ಉದ್ದೇಶ ಪೂರ್ವಕವಾಗಿ ಮಾಡಿರುವ ಮಾನಹಾನಿಕರ ಪೋಸ್ಟ್ ಎಂದು ಹಲವರು ಪೋಲೀಸರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕೊಟ್ಟೂರು ಠಾಣೆಯಲ್ಲಿ ಶಾಂತೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.