ಹಾಸ್ಯನಟ ರಾಜು ಶ್ರೀವಾಸ್ತವ ನಿಧನ

Prasthutha|

ನವದೆಹಲಿ: ಹಿರಿಯ ಹಾಸ್ಯನಟ ರಾಜು ಶ್ರೀವಾಸ್ತವ (58) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಆಗಸ್ಟ್ 11 ರಂದು ಜಿಮ್ ನಲ್ಲಿ ಟ್ರೆಡ್ ಮಿಲ್ ನಲ್ಲಿ ಓಡುವಾಗ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ದೆಹಲಿಯ ಏಮ್ಸ್ ಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

- Advertisement -

ಶ್ರೀವಾಸ್ತವ ಅವರು 1980 ರಿಂದ ಚಿತ್ರರಂಗ ಪ್ರವೇಶಿಸಿದ್ದರು. ‘ಮೈನೆ ಪ್ಯಾರ್ ಕಿಯಾ’, ‘ಆಮ್ದಾನಿ ಅತ್ತಾನಿ ಖರ್ಚಾ ರುಪಾಯಾ’ ಮತ್ತು ‘ಮೇನ್ ಪ್ರೇಮ್ ಕಿ ದೀವಾನಿ ಹೂನ್’ ಮುಂತಾದ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.
2005 ರಲ್ಲಿ ಸ್ಟ್ಯಾಂಡ್-ಅಪ್ ಹಾಸ್ಯ ಕಾರ್ಯಕ್ರಮ “ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್” ನ ಮೊದಲ ಸೀಸನ್ ನಲ್ಲಿ ಭಾಗವಹಿಸಿದ ನಂತರ ಮನ್ನಣೆ ಪಡೆದರು.



Join Whatsapp