Home ಟಾಪ್ ಸುದ್ದಿಗಳು ಅರ್ಧ ಬೆಲೆಗೆ UAE ಕರೆನ್ಸಿ ನೀಡೋದಾಗಿ ಕಲರ್ ಜೆರಾಕ್ಸ್ ಕೊಟ್ಟು ವಂಚನೆ: ಆರೋಪಿಯ ಬಂಧನ

ಅರ್ಧ ಬೆಲೆಗೆ UAE ಕರೆನ್ಸಿ ನೀಡೋದಾಗಿ ಕಲರ್ ಜೆರಾಕ್ಸ್ ಕೊಟ್ಟು ವಂಚನೆ: ಆರೋಪಿಯ ಬಂಧನ

ಬೆಂಗಳೂರು: ಅರ್ಧ ಬೆಲೆಗೆ ಯುಎಇ ಕರೆನ್ಸಿ ಕೊಡುವುದಾಗಿ ಕಲರ್ ಜೆರಾಕ್ಸ್ ಕಾಪಿ ಕೊಟ್ಟು ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಮೂಲದ ಇಮ್ರಾನ್ ಶೇಕ್ ಬಂಧಿತ ಆರೋಪಿ. ಮತ್ತೋರ್ವ ಆರೋಪಿ ರುಕ್ಸಾನ ಪರಾರಿಯಾಗಿದ್ದಾಳೆ. ಉದ್ಯಮಿಗಳು ವಿದೇಶ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರನ್ನ ಪರಿಚಯ ಮಾಡಿಕೊಳ್ಳುತ್ತಿದ್ದ ಈ ಜೋಡಿ ”ತಮ್ಮ ಬಳಿ ಸಾಕಷ್ಟು ಯುಎಇ ಕರೆನ್ಸಿ ಇದೆ. ಆದರೆ ಎಲ್ಲವನ್ನೂ ಎಕ್ಸ್ ಚೇಂಜ್ ಮಾಡಲು ಸಾಧ್ಯವಿಲ್ಲವಾದ್ದರಿಂದ ಮಾರಾಟ ಮಾಡಲು ನಿರ್ಧರಿಸಿದ್ದೇವೆ” ಎನ್ನುತ್ತಿದ್ದರು.

ಭಾರತೀಯ ಕರೆನ್ಸಿಯಲ್ಲಿ ಯುಎಇನ ಒಂದು ದಿರ್ಹಾಮ್ ಬೆಲೆ ಸರಿಸುಮಾರು 22 ರೂಪಾಯಿ. ಆದರೆ ತಮಗೆ 12 ರೂಪಾಯಿಯಂತೆ ಎಕ್ಸ್ ಚೇಂಜ್ ಮಾಡಲು ಸಿದ್ಧವೆಂದು, ನಂಬಿಕೆ ಗಳಿಸಲು ಮೊದಲಿಗೆ ಒಂದು ಅಸಲಿ ದಿರ್ಹಾಮ್ ಕೊಟ್ಟು ಕಳಿಸುತ್ತಿದ್ದರು. ಇಮ್ರಾನ್, ಕಲರ್ ಜೆರಾಕ್ಸ್ ನೋಟುಗಳನ್ನು ಆರೋಪಿಗಳ ಕೈಗಿಟ್ಟು ಎಸ್ಕೇಪ್ ಆಗುತ್ತಿದ್ದ. ವಂಚನೆ ಪ್ರಕರಣ ಬೆನ್ನತ್ತಿದ್ದ ಸಿಸಿಬಿ ಪೊಲೀಸರು, ಆರೋಪಿ ಇಮ್ರಾನ್ ಶೇಕ್ ನನ್ನು ಬಂಧಿಸಿದ್ದಾರೆ.

Join Whatsapp
Exit mobile version