ವಸಾಹತುಶಾಹಿಯ ಪಳೆಯುಳಿಕೆಯಾದ ದೇಶದ್ರೋಹ ಕಾಯ್ದೆ ರದ್ದುಪಡಿಸುವ ಪ್ರಸ್ತಾಪ ಯಾಕಿಲ್ಲ: ಪಿ.ಚಿದಂಬರಂ

Prasthutha|

ನವದೆಹಲಿ: ದೇಶದ್ರೋಹ ಕಾಯ್ದೆಯು ವಸಾಹತುಶಾಹಿ ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿರುವ ಬಗ್ಗೆ ಕೇಂದ್ರ ಕಾನೂನು ಸಚಿವರಿಗೆ ಮಾಹಿತಿ ಇಲ್ಲದಿರುವುದು ಹಾಸ್ಯಾಸ್ಪದ ಎಂದು ಬಣ್ಣಿಸಿದ ಮಾಜಿ ಸಚಿವ ಪಿ.ಚಿದಂಬರಂ ಅವರು ಕಿರಣ್ ರಿಜಿಜು ಅವರ ಕಾಲೆಳೆದಿದ್ದಾರೆ. ಸುಪ್ರೀಮ್ ಕೋರ್ಟ್ ಉಲ್ಲೇಖಿಸಿರುವಂತೆ ಹಳೆಯದಾದ ಈ ಕಾಯ್ದೆಯನ್ನು ರದ್ದುಪಡಿಸುವ ಪ್ರಸ್ತಾಪವನ್ನು ಸರ್ಕಾರ ಸಂಸತ್ ನಲ್ಲಿ ಯಾಕೆ ಚರ್ಚಿಸುತ್ತಿಲ್ಲ ಎಂದು ಪ್ರಶ್ನಿಸಿದರು.

- Advertisement -

ದೇಶದ್ರೋಹ ಕಾಯ್ದೆಯ ಮೂಲಕ ಸಾಕಷ್ಟು ಅಮಾಯಕರನ್ನು ಹಿಂಸಿಸಲಾಗಿದೆ ಎಂದು ಅವರು ತಿಳಿಸಿದರು.

ಶುಕ್ರವಾರ ಲೋಕಸಭಾ ಕಲಾಪದ ವೇಳೆ ಐಪಿಸಿ ಸೆಕ್ಷನ್ 124 ಎ ದೇಶದ್ರೋಹ ಕಾಯ್ದೆಯನ್ನು ರದ್ದುಪಡಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಈ ಬಗ್ಗೆ ಸಚಿವಾಲಯ ಏನನ್ನು ಮುಂದಿಟ್ಟಿಲ್ಲ ಎಂದು ರಿಜೆಜು ತಿಳಿಸಿದ್ದರು.

- Advertisement -

ಅಸ್ಸಾಮ್ ಸಂಸದ ಬದ್ರುದ್ದೀನ್ ಅಝ್ಮಲ್, ದೇಶದ್ರೋಹದ ಕಾನೂನು ವಸಾಹತುಶಾಹಿ ಕಾಲಘಟ್ಟದ್ದಾಗಿದೆ ಎಂದು ಸುಪ್ರೀಮ್ ಕೋರ್ಟ್ ತಿಳಿಸಿದೆ. ಅಝ್ಮಲ್ ಪ್ರಶ್ನೆಗೆ ರಿಜಿಜು ಈ ಮೇಲಿನಂತೆ ಪ್ರತಿಕ್ರಿಯಿಸಿದ್ದರು.

ರಿಜಿಜು ಅವರ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಚಿದಂಬರಂ, ವಸಾಹತುಶಾಹಿ ಕಾನೂನನ್ನು ಯಾಕೆ ಸರ್ಕಾರ ರದ್ದುಪಡಿಸುತ್ತಿಲ್ಲ ಎಂದು ಕೇಂದ್ರ ಸಚಿವ ರಿಜಿಜು ಅವರನ್ನು ಪ್ರಶ್ನಿಸಿದ್ದಾರೆ. ಈ ಕಾಯ್ದೆಯನ್ನು ಅಮಾಯಕರನ್ನು ಪೀಡಿಸಲು ಬಳಸಲಾಗುತ್ತಿದೆ ಎಂದು ತಿಳಿಸಿದ್ದರು.

ಅಮಾಯಕರನ್ನು ಹಿಂಸಿಸಲು ಗೃಹ ಇಲಾಖೆಗೆ ಈ ಕಾಯ್ದೆಯ ಅಗತ್ಯವಿದೆ ಎಂದು ಚಿದಂಬರಂ ಒತ್ತಿ ಹೇಳಿದರು. ಸುಪ್ರೀಮ್ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಕಾನೂನು ಸಚಿವರಿಗೆ ಮಾಹಿತಿ ಇಲ್ಲದಿರುವುದು ದುರಂತ ಎಂದು ಅವರು ರಿಜಿಜು ಅವರ ಕಾಲೆಳೆದಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp