Home ಟಾಪ್ ಸುದ್ದಿಗಳು ಕ್ಯಾಂಟರ್ ಕಾರುಗಳ ಮಧ್ಯೆ ಡಿಕ್ಕಿ; ತಂದೆ-ಮಗ ಸಾವು, ಮೂವರು ಗಂಭೀರ

ಕ್ಯಾಂಟರ್ ಕಾರುಗಳ ಮಧ್ಯೆ ಡಿಕ್ಕಿ; ತಂದೆ-ಮಗ ಸಾವು, ಮೂವರು ಗಂಭೀರ

ಹಾಸನ: ಕ್ಯಾಂಟರ್ ಹಾಗೂ ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದು ತಂದೆ-ಮಗ ಇಬ್ಬರು  ಮೃತಪಟ್ಟಿರುವ ಘಟನೆ ಆಲೂರು ತಾಲೂಕಿನ, ಆಲೂರು-ಈಶ್ವರಹಳ್ಳಿ ಕೂಡಿಗೆ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.

ತಮಿಳುನಾಡು ಮೂಲದ ಅಂಜನಪ್ಪ (40), ಕಾರ್ತಿಕ್ (17) ಮೃತ ದುರ್ದೈವಿಗಳು. ಧರ್ಮಸ್ಥಳಕ್ಕೆಂದು 2 ಕಾರಿನಲ್ಲಿ 10 ಮಂದಿ ತೆರಳುತ್ತಿದ್ದರು. ಅದರಲ್ಲಿ ಒಂದು ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿ, ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಅವೈಜ್ಞಾನಿಕ ಸಂಚಾರ  ವ್ಯವಸ್ಥೆ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಹೆದ್ದಾರಿಯ ಹಲವೆಡೆ ಹಲವು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಘಾತದ ಸ್ಥಳಕ್ಕೆ ಆಲೂರು ವೃತ್ತ ನಿರೀಕ್ಷಕ ಹೇಮಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version