Home ಟಾಪ್ ಸುದ್ದಿಗಳು ಅಂಬೂರ್ ಬಿರಿಯಾನಿ ಉತ್ಸವದಲ್ಲಿ ಗೋಮಾಂಸ ಕಿತ್ತುಹಾಕಿದ ಕಲೆಕ್ಟರ್ : ಆಕ್ರೋಶಗೊಂಡ ದಲಿತ ಆಯೋಗ

ಅಂಬೂರ್ ಬಿರಿಯಾನಿ ಉತ್ಸವದಲ್ಲಿ ಗೋಮಾಂಸ ಕಿತ್ತುಹಾಕಿದ ಕಲೆಕ್ಟರ್ : ಆಕ್ರೋಶಗೊಂಡ ದಲಿತ ಆಯೋಗ

ಚೆನ್ನೈ: ಬಿರಿಯಾನಿ ಹಬ್ಬದ ಮೆನುವಿನಿಂದ ಗೋಮಾಂಸವನ್ನು ತೆಗೆದಿದ್ದಕ್ಕಾಗಿ ತಮಿಳುನಾಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್ಸಿ / ಎಸ್ಟಿ) ಆಯೋಗವು ತಿರುಪಟೂರು ಜಿಲ್ಲಾಧಿಕಾರಿಯಿಂದ ವಿವರಣೆ ಕೇಳಿದ್ದು ಡಿಸಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ.

ಮೇ 12 ರಿಂದ 15 ರವರೆಗೆ ನಡೆಯಬೇಕಿದ್ದ ಮೂರು ದಿನಗಳ ‘ಅಂಬೂರ್ ಬಿರಿಯಾನಿ ಉತ್ಸವ’ವನ್ನು ಮುಂದೂಡಲಾಗಿದ್ದು, ಗೋಮಾಂಸ ಅಂಗಡಿಗಳನ್ನು ಹೊರಗಿಡುವ ಬಗ್ಗೆ ಉದ್ವಿಗ್ನತೆ ನಿರ್ಮಾಣವಾಗಿದ್ದರೂ ಜಿಲ್ಲಾಡಳಿತವು ಮಳೆಯನ್ನು ಕಾರಣದಿಂದ ಉತ್ಸವವನ್ನು ಮುಂದೂಡಿದ್ದೇವೆ ಎಂದು ತಿಳಿಸಿದೆ.

ಕೋಳಿ ಮತ್ತು ಮೀನು ಸೇರಿದಂತೆ 20 ಕ್ಕೂ ಹೆಚ್ಚು ಬಿರಿಯಾನಿ ಮಳಿಗೆಗಳನ್ನು ಪ್ರದರ್ಶಿಸುವ ಜಿಲ್ಲಾಡಳಿತವು ಗೋಮಾಂಸ ಬಿರಿಯಾನಿಯನ್ನು ಹೊರಗಿಡಬೇಕು ಎಂದು ನಿರ್ದಿಷ್ಟವಾಗಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಆಕ್ರೋಶಗೊಂಡ ದಲಿತ ಆಯೋಗವು ಇದನ್ನು ಕೋಮು ಆಧಾರದ ತಾರತಮ್ಯದಲ್ಲಿ ಕೈಗೊಂಡ ನಿರ್ಧಾರ ಮತ್ತು ಅಂತಹ ಅಧಿಕೃತ ತಾರತಮ್ಯಕ್ಕಾಗಿ ವಿವರಣೆ ನೀಡಬೇಕೆಂದು ಜಿಲ್ಲಾಧಿಕಾರಿಗೆ ಅರ್ಜಿ ನೀಡಿದೆ.

Join Whatsapp
Exit mobile version