Home ಟಾಪ್ ಸುದ್ದಿಗಳು ಕಾಲೇಜು ಬಸ್ ಅಪಘಾತ: ಓರ್ವ ಮೃತ್ಯು, 44 ಮಂದಿಗೆ ಗಾಯ

ಕಾಲೇಜು ಬಸ್ ಅಪಘಾತ: ಓರ್ವ ಮೃತ್ಯು, 44 ಮಂದಿಗೆ ಗಾಯ

ಇಡುಕ್ಕಿ: ಕಾಲೇಜು ವಿದ್ಯಾರ್ಥಿಗಳ ಪ್ರವಾಸಿ ಬಸ್ ಅಪಘಾತವಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟು, 44 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಆದಿಮಾಲಿ ಬಳಿ ಭಾನುವಾರ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಮಿಲ್ಹಾಜ್ ಎಂದು ಗುರುತಿಸಲಾಗಿದೆ.

ಬಸ್ ಮಲಪ್ಪುರಂನ ತಿರೂರ್ನಲ್ಲಿರುವ ಪ್ರಾದೇಶಿಕ ಕೈಗಾರಿಕಾ ತರಬೇತಿ ಸಂಸ್ಥೆಯ (ಐಟಿಐ) ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗುತ್ತಿದ್ದಾಗ ಕಲ್ಲರಕುಟ್ಟಿ-ಮೈಲಾಡುಂಪಾರ ಮಾರ್ಗದ ತಿಂಗಳಕಡ್ ಸಮೀಪದ ಮುನಿಯಾರ ಎಂಬಲ್ಲಿ ಈ ದುರ್ಘಟನೆ ನಡೆದಿದೆ.

Join Whatsapp
Exit mobile version