ದೋಹಾ: ಕತಾರ್’ನ ದೋಹಾದಲ್ಲಿ ಅನಿವಾಸಿ ಪ್ರವಾಸಿಗರಿಗಾಗಿ ‘ಮಾಮುರ ಕಿಂಗ್ಸ್’ ವತಿಯಿಂದ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಕರಾವಳಿ ಫ್ರೆಂಡ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕರಾವಳಿ ಫ್ರೆಂಡ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ G4s phoenix ತಂಡ 122ಕ್ಕೆ ಆಲ್ ಔಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಕರಾವಳಿ ಫ್ರೆಂಡ್ಸ್ ತಂಡ 8 ವಿಕೆಟ್ ಕಳೆದುಕೊಂಡು 123 ರನ್ ಮಾಡುವ ಮೂಲಕ ಜಯಗಳಿಸಿತು.
ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಶಾಕಿರ್ ಬೆಲ್ವೆ ತಮ್ಮದಾಗಿಸಿಕೊಂಡರು. ಸೆಮಿ ಫೈನಲ್ ನಲ್ಲೂ ಶಾಕಿರ್ ಅವರು ಅತ್ಯುತ್ತಮ ಬೌಲರ್ ಪ್ರಶಸ್ತಿಗೆ ಭಾಜನರಾದರು.
ಕರಾವಳಿ ಫ್ರೆಂಡ್ಸ್ ತಂಡದ ಕಪ್ತಾನ ಅಝೀಝ್ ಹಾಗೂ ಉಪ ಕಪ್ತಾನ ಮಿಜಾರ್ ಅನ್ವರ್ ಅಲಿ, ವ್ಯವಸ್ಥಾಪಕ ಪವಿ ತೋಡಾರ್ ಮತ್ತು ತಂಡದ ಸದಸ್ಯರು ಟ್ರೋಫಿಯನ್ನು ಸ್ವೀಕರಿಸಿ ಸಂಭ್ರಮಿಸಿದರು.
ಇದಕ್ಕೂ ಮೊದಲು ಕರಾವಳಿ ಫ್ರೆಂಡ್ಸ್ ಮತ್ತು ಮಂಗಳೂರು ಬ್ಲಸ್ಟರ್ಸ್ ನಡುವೆ ಸೆಮಿಫೈನಲ್ ಪಂದ್ಯ ನಡೆದಿದ್ದು, ಈ ಪಂದ್ಯದಲ್ಲಿ ಕರಾವಳಿ ಫ್ರೆಂಡ್ ತಂಡ ಮಂಗಳೂರು ಬ್ಲಸ್ಟರ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು.
ಪಂದ್ಯಾಕೂಟದಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು.