Home ಟಾಪ್ ಸುದ್ದಿಗಳು ಭಾರತೀಯ ನೌಕಾಪಡೆಯ ಡೈರೆಕ್ಟರ್ ಜನರಲ್ ರಾಕೇಶ್ ಪಾಲ್ ನಿಧನ

ಭಾರತೀಯ ನೌಕಾಪಡೆಯ ಡೈರೆಕ್ಟರ್ ಜನರಲ್ ರಾಕೇಶ್ ಪಾಲ್ ನಿಧನ

ಚೆನ್ನೈ: ಭಾರತೀಯ ನೌಕಾಪಡೆಯ ಡೈರೆಕ್ಟರ್ ಜನರಲ್ ರಾಕೇಶ್ ಪಾಲ್ ಹೃದಯಾಘಾತದಿಂದ ಇಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಹಿನ್ನೆಲೆಯಲ್ಲಿ ಐಎನ್‌ಎಸ್‌ ಅಡ್ಯಾರ್ ನೌಕೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾಗ ಇಂದು ಮಧ್ಯಾಹ್ನ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಕೂಡಲೇ ಚೆನ್ನೈನ ರಾಜೀವ್‌ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯರ ಸತತ ಪ್ರಯತ್ನದ ಬಳಿಕವೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಸಂಜೆ 7 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ.

Join Whatsapp
Exit mobile version