Home ಟಾಪ್ ಸುದ್ದಿಗಳು ಹಿಜಾಬ್ ವಾಪಸ್ ವಿಚಾರದಲ್ಲಿ ಲೀಗಲ್ ತಂಡ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸಿಎಂ ನಿರ್ಧಾರ: ಮಧು ಬಂಗಾರಪ್ಪ

ಹಿಜಾಬ್ ವಾಪಸ್ ವಿಚಾರದಲ್ಲಿ ಲೀಗಲ್ ತಂಡ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸಿಎಂ ನಿರ್ಧಾರ: ಮಧು ಬಂಗಾರಪ್ಪ

ಬೆಂಗಳೂರು: ಮುಖ್ಯಮಂತ್ರಿಗಳು ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಹಿಂದೆಗೆದುಕೊಂಡಿದ್ದು, ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಹಿಜಾಬ್ ನಿಷೇಧ ಹಿಂಪಡೆಯುವ ಬಗ್ಗೆ ಮುಖ್ಯಮಂತ್ರಿ ಲೀಗಲ್ ತಂಡ ಮತ್ತು ಅಧಿಕಾರಿಗಳ ಜೊತೆಗೆ ಚರ್ಚುಸಿ ಸೂಕ್ತವಾದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಚುನಾವಣೆಗೆ ಮೊದಲು ಕೂಡ ನಮ್ಮ ಪಕ್ಷ ಹಿಜಾಬ್ ನಿಷೇಧವನ್ನು ಬಲವಾಗಿ ವಿರೋಧಿಸಿತ್ತು ಎಂದು ಸಚಿವರು ಹೇಳಿದರು. ನಿನ್ನೆ ಮೈಸೂರಲ್ಲಿ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಅದನ್ನೇ ಹೇಳಿದ್ದು, ಅವರವರ ಸಂಪ್ರದಾಯ ಹಾಗೂ ಪದ್ಧತಿಗಳನ್ನು ಆಚರಿಸಲು ಯಾವುದೇ ಅಡ್ಡಿಯಿಲ್ಲ ಎಂದು ಹೇಳಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು. ಬಿಜೆಪಿ ಚುನಾವಣೆ ಹತ್ತಿರ ಬಂದಾಗ ಪರೇಶ್ ಮೇಸ್ತಾ, ಹಿಜಾಬ್ ನಂಥ ವಿಷಯಗಳನ್ನು ಮುನ್ನೆಲೆಗೆ ತರುತ್ತದೆ. ಬಿಜೆಪಿಯವರಿಗೆ ಉತ್ತರಿಸುವ ಅವಶ್ಯಕತೆ ನಮಗಿಲ್ಲ ಎಂದು ಕೂಡ ಮಧು ಬಂಗಾರಪ್ಪ ಹೇಳಿದ್ದಾರೆ.

Join Whatsapp
Exit mobile version