Home ಟಾಪ್ ಸುದ್ದಿಗಳು ಸ್ಪಂದನಾ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಸ್ಪಂದನಾ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಹೃದಯಾಘಾತದಿಂದ ಮೃತಪಟ್ಟಿರುವ ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಮಲ್ಲೇಶ್ವರದ ಅವರ ತವರು ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಸ್ಪಂದನಾರ ಅಂತಿಮ ದರ್ಶನವನ್ನು ಪಡೆದಿದ್ದಾರೆ.


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬದುಕಿ ಬಾಳಬೇಕಾದ ಜೀವ, 37 ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ. ಅವರ ಪತಿ ವಿಜಯ್ ರಾಘವೇಂದ್ರ ಒಬ್ಬ ಖ್ಯಾತ ಚಲನಚಿತ್ರ ನಟ, ಸ್ಪಂದನಾ ಅವರು ಸಹ ‘ಅಪೂರ್ವ’ ಹೆಸರಿನ ಒಂದು ಸಿನಿಮಾದಲ್ಲಿ ನಟಿದ್ದರು ಎಂದು ಕೇಳ್ಪಟ್ಟೆ. 14 ವರ್ಷದ ಮಗ ಇದ್ದಾನೆ, ಬಹಳ ಸಣ್ಣ ವಯಸ್ಸಿಗೆ ಅಗಲಿದ್ದಾರೆ, ಜೀವನದಲ್ಲಿ ಸಾಕಷ್ಟು ನೋಡುವುದು ಇತ್ತು. ಟಿವಿನಲ್ಲಿ ಅವರ ದಾಂಪತ್ಯದ ಬಗ್ಗೆ ಪ್ರಸಾರವಾದ ವರದಿಗಳನ್ನು ನೋಡಿದೆ ಬಹಳ ಸುಂದರವಾದ ಕುಟುಂಬ ಅವರದ್ದು ಅನಿಸಿತು, ಬಹಳ ಆನಂದದಿಂದ ಇದ್ದರು. ಆದರೆ ವಿಧಿ ಹೀಗೆ ಮಾಡಿದೆ. ಥಾಯ್ಲೆಂಡ್ಗೆ ಹೋಗಿ ಜೀವ ಬಿಟ್ಟಿರುವುದು ಬಹಳ ಬೇಸರ ತಂದಿದೆ. ಇಷ್ಟು ಬೇಗ ಹೀಗೆ ಆಗುತ್ತದೆ ಎಂದರೆ ಯಾರಿಗೂ ಸಹ ನಂಬಿಕೆ ಬರುತ್ತಿಲ್ಲ. ಅವರ ಕುಟುಂಬಕ್ಕೆ ಆಗಿರುವ ಬಹಳ ದೊಡ್ಡ ನಷ್ಟ ಇದು. ಬಿಕೆ ಶಿವರಾಂ ಹಾಗೂ ರಾಘವೇಂದ್ರ ಕುಟುಂಬಕ್ಕೆ ದೊಡ್ಡ ಲಾಸ್, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಎಲ್ಲ ಸಂಬಂಧಿಕರಿಗೆ, ಹಿತೈಷಿಗಳಿಗೆ ದುಖಃ ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದರು.

Join Whatsapp
Exit mobile version