Home ಟಾಪ್ ಸುದ್ದಿಗಳು ಬಜೆಟ್ ಮಂಡನೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

ಬಜೆಟ್ ಮಂಡನೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

ಅಬಕಾರಿ ಸುಂಕ ಹೆಚ್ಚಳ; ಶಿಕ್ಷಣ ಕ್ಷೇತ್ರಕ್ಕೆ 37 ಸಾವಿರ ಕೋಟಿ ರೂ. ಮೀಸಲು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಇಂದು ದಾಖಲೆಯ 14ನೇ ಬಜೆಟ್ ಮಂಡನೆ ಆರಂಭಿಸಿದ್ದಾರೆ. 3.24 ಲಕ್ಷ ಕೋಟಿ ರೂ. ಮೌಲ್ಯದ ಬಜೆಟ್‌ ಮಂಡಿಸುತ್ತಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಲ್ಲಿ ಬಜೆಟ್‌ ಮಂಡಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಐದೂ ಗ್ಯಾರಂಟಿ ಜಾರಿ ಮಾಡುತ್ತಿದ್ದೇವೆ: ಸಿದ್ದರಾಮಯ್ಯ

ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿ ಜಾರಿಗೆ ಮುಂದಾಗಿದ್ದೇವೆ. ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿ ಮತ್ತು ಉಳಿದ 5 ಕೆ.ಜಿ ಅಕ್ಕಿ ಬದಲು ಹಣ ನೀಡುತ್ತಿದ್ದೇವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭಿಸಿದ್ದೇವೆ. ಗೃಹಜ್ಯೋತಿಯನ್ನು ಜುಲೈನಲ್ಲಿ ಜಾರಿ ಮಾಡಿದ್ದೇವೆ. ಆಗಸ್ಟ್‌ ನಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡುತ್ತೇವೆ.

ಇಂದಿರಾ ಕ್ಯಾಂಟಿನ್ ಗೆ 100 ಕೋಟಿ ರೂ.

5 ಗ್ಯಾರೆಂಟಿಗೆ 52 ಸಾವಿರ ಕೋಟಿ ರೂ.

ಬೆಂಗಳೂರಿಗೆ ಬಂಪರ್ ಗಿಫ್ಟ್ : ಬೆಂಗಳೂರು ಅಭಿವೃದ್ಧಿ 45 ಸಾವಿರ ಕೋಟಿ ರೂ.

ಮೆಟ್ರೋ ರೈಲು,  ಉಪನಗರ ರೈಲು 30 ಸಾವಿರ ಕೋಟಿ ರೂ.

ಕನಕಪುರ ತಾಲೂಕಿನಲ್ಲಿ ಮೆಡಿಕಲ್ ಕಾಲೇಜ್

ಮೈಸೂರು, ಬೆಳಗಾವಿ, ಕಲಬುರುಗಿಯಲ್ಲಿ ಸೂಪರ್ ಸ್ಲೆಷಲಿಟಿ ಆಸ್ಪತ್ರೆ

ಕೊಪ್ಪಳ, ಕಾರವಾರ, ಕೊಡಗು ಜಿಲ್ಲಾಸ್ಪತ್ರೆ ಉನ್ನತಿಕಾರಣ

ಸರ್ಕಾರಿ ಶಾಲೆಗಳಲ್ಲಿ ನೂತನ 8311 ಕೊಠಡಿಗಳ ನಿರ್ಮಾಣಕ್ಕೆ 550 ಕೋಟಿ

ಹಿಂದಿನ ಸರ್ಕಾರದ ಪಠ್ಯ ಪರಿಷ್ಕರಣೆ ಗೆ ನಿರ್ಧಾರ

ಗೃಹಜ್ಯೋತಿ ಯೋಜನೆಗೆ 13910 ಕೋಟಿ ರೂ.- 2 ಕೋಟಿ ಗ್ರಹಕರಿಗೆ ಲಾಭ

ಸಮಾಜ ಕಲ್ಯಾಣ ಇಲಾಖೆಗೆ 11,173 ಕೋಟಿ ರೂ.

ಆಹಾರ ಇಲಾಖೆ 10,460 ಕೋಟಿ ರೂ.

ಶಾಲಾ ಕಾಲೇಜುಗಳಲ್ಲಿ ಶೌಚಲಯ ನಿರ್ಮಾಣಕ್ಕೆ 200 ಕೋಟಿ

Join Whatsapp
Exit mobile version