►‘ಹಲಾಲ್ ಎಂದರೆ ಉತ್ತಮ ಆಹಾರ ಎಂದರ್ಥ’
ತಿರವನಂತಪುರಂ: ಸಂಘಪರಿವಾರವು ಒಂದು ವಿಭಾಗವನ್ನು ದಮನಿಸಲು ‘ಹಲಾಲ್’ ಎಂಬ ಪದವನ್ನು ಉಪಯೋಗಿಸುತ್ತಿದೆ. ‘ಹಲಾಲ್’ ಎಂದರೆ ಉತ್ತಮ ಆಹಾರ ಎಂದರ್ಥ. ಸಂಘಪರಿವಾರ ‘ಹಲಾಲ್’ ಹೆಸರಿನಲ್ಲಿ ಒಡಕು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಹಲಾಲ್ ಹೆಸರಿನಲ್ಲಿ ಸಂಘಪರಿವಾರದ ಷಡ್ಯಂತ್ರವು ಆಧುನಿಕ ಪ್ರಜಾಪ್ರಭುತ್ವದಿಂದ ಭಿನ್ನವಾಗಿ ಹಿಂದುತ್ವ ರಾಷ್ಟ್ರಕ್ಕೆ ನಡೆಸಲಾಗುತ್ತಿರುವ ಯತ್ನವಾಗಿದೆ. ‘ಹಲಾಲ್’ ಎಂದರೆ ಉತ್ತಮ ಆಹಾರ ಎಂದರ್ಥ. ಸಂಘಪರಿವಾರವು ಒಂದು ವಿಭಾಗವನ್ನು ದಮನಿಸಲು ‘ಹಲಾಲ್’ ಎಂಬ ಪವಿತ್ರವಾದ ಪದವನ್ನು ಉಪಯೋಗಿಸುತ್ತಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ಶಬರಿಮಲೆ ಸೇರಿದಂತೆ ಕೇರಳದಲ್ಲಿ ಸಂಘಪರಿವಾರ ಹಲಾಲ್ ವಿಚಾರದಲ್ಲಿ ಭಾರೀ ಅಪಪ್ರಚಾರ ನಡೆಸುತ್ತಿದೆ. ಹಲಾಲ್ ಆಹಾರ ಕೊಡುವ ಹೊಟೇಲಿಗೆ ಹೋಗಬೇಡಿ ಎಂದು ಸಂಘಪರಿವಾರದ ನಾಯಕರು ಹೇಳಿದ್ದರು. ನಂತರ ಇದರ ವಿರುದ್ಧ ಕೇರಳದ ಹಲವು ಕಡೆಗಳಿಂದ ಪ್ರತಿಭಟನೆ ವ್ಯಕ್ತವಾಗಿತ್ತು.